ದಿನಕ್ಕೊಂದು ಪೌರಾಣಿಕ ಕಥೆ • 𝗙𝗼𝗹𝗹𝗼𝘄
June 6, 2025 at 04:02 AM
ನಿರ್ಜಲ ಏಕಾದಶಿ ಕಥೆ: ನಿರ್ಜಲ ಏಕಾದಶಿ ಅತ್ಯಂತ ಶ್ರೇಷ್ಠ ಮತ್ತು ಕಠಿಣವಾದ ಏಕಾದಶಿಯಾಗಿದೆ. ಇದು ಜೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನದಲ್ಲಿ ಬರುತ್ತದೆ. “ನಿರ್ಜಲ” ಎಂದರೆ ನೀರಿಲ್ಲದೆ ಉಪವಾಸ. ಈ ದಿನ ಭಕ್ತರು ಸಂಪೂರ್ಣವಾಗಿ ಆಹಾರ ಮತ್ತು ನೀರನ್ನು ತ್ಯಜಿಸುತ್ತಾರೆ. ಈ ಏಕಾದಶಿಯ ಮಹತ್ವವನ್ನು ಭಗವತ್ ಮಹಾಪುರಾಣ ಮತ್ತು ಪದ್ಮಪುರಾಣಗಳಲ್ಲಿ ವಿವರಿಸಲಾಗಿದೆ. ಮಹರ್ಷಿ ವ್ಯಾಸರು ಧರ್ಮರಾಜ ಯುಧಿಷ್ಠಿರರಿಗೆ ಈ ಏಕಾದಶಿಯ ಮಹಿಮೆ ಹೇಳಿದ ಸಂದರ್ಭದಲ್ಲಿ, ಭೀಮನವರು ಕೇಳುತ್ತಾರಂತೆ: “ನಾನು ಅತ್ಯಧಿಕ ಆಹಾರ ಸೇವಿಸುವವನಾಗಿ ಪ್ರತಿದಿನ ಉಪವಾಸ ಮಾಡುವುದು ನನ್ನಿಂದ ಸಾಧ್ಯವಿಲ್ಲ. ನಾನು ಏಕದಿನ ಉಪವಾಸದಿಂದ ಎಲ್ಲ ಏಕಾದಶಿಗಳ ಫಲವನ್ನು ಪಡೆಯಬಹುದೆ?” ಅದಕ್ಕೆ ಮಹರ್ಷಿ ವ್ಯಾಸರು ಉತ್ತರಿಸುತ್ತಾರೆ: “ನೀವು ಜ್ಯೇಷ್ಠ ಶುದ್ಧ ಏಕಾದಶಿಯಂದು ನೀರಿಲ್ಲದೆ ಉಪವಾಸ ಮಾಡಿದರೆ, ಎಲ್ಲಾ 24 ಏಕಾದಶಿಗಳ ಫಲವನ್ನೂ ಸಂಪಾದಿಸಬಹುದು.” ಅದರಿಂದ ಭೀಮನೇ ಮೊದಲನೆಯವರಾಗಿ ಈ ಏಕಾದಶಿಯ ಕಠಿಣ ಉಪವಾಸ ಆಚರಿಸಿ “ಭೀಮಾ ಏಕಾದಶಿ” ಎಂದು ಪ್ರಸಿದ್ಧಿಯಾದರು. ಪೌರಾಣಿಕ ಕಥೆಗಳಲ್ಲಿ ಆಸಕ್ತಿ ಇದ್ದವರು youtube link ಒತ್ತಿ 👇👇👇👇 https://ytube.openinapp.co/pouranika-kathegalu
Image from ದಿನಕ್ಕೊಂದು ಪೌರಾಣಿಕ ಕಥೆ • 𝗙𝗼𝗹𝗹𝗼𝘄: ನಿರ್ಜಲ ಏಕಾದಶಿ ಕಥೆ:  ನಿರ್ಜಲ ಏಕಾದಶಿ ಅತ್ಯಂತ ಶ್ರೇಷ್ಠ ಮತ್ತು ಕಠಿಣವಾದ ಏಕಾದಶಿಯ...
🙏 ❤️ 13

Comments