𝗦𝗮𝗻𝗮𝘁𝗮𝗻𝗮 Hindu 𝗗𝗛𝗔𝗥𝗠𝗔 ಸನಾತನ ಹಿಂದೂ 🙏
                                
                            
                            
                    
                                
                                
                                June 18, 2025 at 11:53 AM
                               
                            
                        
                            "*ನಾನಿಲ್ಲಿ ಇಲ್ಲದಿದ್ದರೆ*... ಅನ್ನುವ ಪದ ಎಲ್ಲರಲ್ಲಿಯೂ ಬಂದೆ ಬರುತ್ತದೆ ಜೀವನದಲ್ಲಿ.
*ನನ್ನಿಂದ ನನ್ನ ಸಂಸಾರ ,ಮಡದಿ, ಮಕ್ಕಳು*, ಕೆಲಸ ಕಾಯ೯ ಅನ್ನುವ ಭ್ರಮೆಯಲ್ಲಿ ಭಗವಂತನನ್ನು ಮರೆತು ಬಿಡುತ್ತೆವೆ.
 ಹೀಗೆ ಸುಂದರಕಾಂಡದಲ್ಲಿ  *ಹನುಮಂತ* ದೇವರ ಒಂದು ಸುಂದರ ಪ್ರಸಂಗ ಓದಿ.
****ಲಂಕಾ ದಹನ****
ಅಶೋಕ ವನದಲ್ಲಿ *ರಾವಣ... ಸೀತಮ್ಮ* ಅವರ ಮೇಲೆ ಕೋಪಗೊಂಡು, ಕತ್ತಿಯಿಂದ ಅವಳನ್ನು ಕೊಲ್ಲಲು ಮುಂದಾದಾಗ.... ಹನುಮಂತನಿಗೆ ನಾನು ಯಾರಿಂದಾದರೂ ಖಡ್ಗವನ್ನು ತೆಗೆದುಕೊಂಡು ರಾವಣಾಸುರನ ಶಿರಚ್ಛೇದ ಮಾಡಬೇಕು’ ಎಂದುಕೊಂಡನು.
ಆದರೆ ಮರು ಕ್ಷಣದಲ್ಲಿ *ಮಂಡೋದರಿ*... ರಾವಣನ ಕೈ ಹಿಡಿದು ನಿಲ್ಲಿಸುವುದನ್ನು ಕಂಡನು! ಅವನಿಗೆ ಆಶ್ಚರ್ಯವಾಯಿತು.
*ಹನುಮಂತ* ಯೋಚಿಸಿದ, "ನಾನಿಲ್ಲಿ ಇಲ್ಲದಿದ್ದರೆ... *ಸೀತಮ್ಮನನ್ನು* ಕಾಪಾಡುವವರಾರು.ಎಂದುಕೊಂಡಿದ್ದೆ.. ಬಹುಶಃ ಇದು ನನ್ನ ಭ್ರಮೆ!" 
ಭಗವಂತ ಮಾತ್ರ ಸೀತಾಮಾತೆಯನ್ನು ರಕ್ಷಿಸುವ ಕೆಲಸವನ್ನು ರಾವಣನ ಹೆಂಡತಿಗೆ ವಹಿಸಿದನು.
ಆಗ ಹನುಮಂತನಿಗೆ ಅರ್ಥವಾಯಿತು, ‘*ಯಾರಿಂದ ಯಾವ ಕೆಲಸ ಆಗಬೇಕು... ಅವರ ಮೂಲಕ ಭಗವಂತ  ಮಾಡುತ್ತಾನೆ*’ ಎಂದು.
ಮುಂದೆ ಹೋಗುತ್ತಾ *ತ್ರಿಜಟಾ* - ನೀನು ಲಂಕೆಗೆ ಬಂದು ಲಂಕೆಯನ್ನು ಸುಡುವ ಕನಸನ್ನು ಕಂಡೆ ಎಂದು ಹನುಮಂತನಿಗೆ ಹೇಳಿದಳು.
ಆದರೆ ಇದು ಹನುಮಂತನಿಗೆ ಅತಿ ಆಶ್ಚರ್ಯವೆನಿಸಿತು. ಏಕೆಂದರೆ ಭಗವಂತನು ಸೀತೆಯನ್ನು ನೋಡಲು ಮಾತ್ರ ಹೇಳಿದ್ದನು ಮತ್ತು ಲಂಕೆಯನ್ನು ಸುಡುವಂತೆ ಹೇಳಿರಲಿಲ್ಲ.
ಲಂಕೆಯನ್ನು ಸುಡಲು ತನ್ನಿಂದ ಹೇಗೆ ಸಾಧ್ಯ.. ಎಂದು ಯೋಚಿಸಿದನು
ಆದರೆ ಇದನ್ನು ತನ್ನ ಕನಸಿನಲ್ಲಿ ಕಂಡೆ ಎಂದು *ತ್ರಿಜಟಾ* ಹೇಳಿದ್ದಾಳೆ. ಧರ್ಮ ಮೀಮಾಂಸೆಗೆ ಬಿದ್ದ ಹನುಮಂತ... ಈಗ ಏನು ಮಾಡಬೇಕು? ಸರಿ, ಭಗವಂತನ ಇಚ್ಛೆಯಂತೆ ಆಗಲಿ.... ಎಂದುಕೊಂಡನು.
ರಾವಣನ ಸೈನಿಕರು ಹನುಮಂತನನ್ನು ಕೊಲ್ಲಲು ಓಡೋಡಿ ಬಂದಾಗ... ಹನುಮಂತ ಏನೂ ಮಾಡಲಿಲ್ಲ. ಅವನು ಹಾಗೆಯೇ ಸುಮ್ಮನೆ ನಿಂತನು.
ಆದರೆ ಆ ವೇಳೆಗೆ *ವಿಭೀಷಣ* ಬಂದ,ಆ ಸೈನಿಕರಿಗೆ ದೂತನನ್ನು ಕೊಲ್ಲುವುದು ಸರಿಯಲ್ಲ ಎಂದನು
ಆಗ ಹನುಮಂತನಿಗೆ ಭಗವಂತ ತನ್ನನ್ನು ರಕ್ಷಿಸುವ ಹೊಣೆಯನ್ನು *ವಿಭೀಷಣನ* ಮೇಲಿರಿಸಿದ್ದಾನೆಂದು ಅರಿವಾಯಿತು.
ಅಚ್ಚರಿಯ ಪರಾಕಾಷ್ಠೆ. ಎಂದರೆ ವಿಭೀಷಣ ಹೇಳಿದಾಗ...ರಾವಣನು ಒಪ್ಪಿ 'ಕೋತಿಯನ್ನು ಕೊಲ್ಲಬೇಡ. ಮಂಗಗಳು ತಮ್ಮ ಬಾಲವನ್ನು ಹೆಚ್ಚಾಗಿ ಪ್ರೀತಿಸುತ್ತವೆ. ಬಾಲಕ್ಕೆ ಬೆಂಕಿ ಹಚ್ಚಿರಿ ಎಂದಾಗ.
ಆಗ ತ್ರಿಜಟಾಳ ಕನಸು ನನಸಾಗಲಿದೆ ಎಂದು ಹನುಮಂತನಿಗೆ ಹೆಚ್ಚು ಮನದಟ್ಟಾಯಿತು. ಒಂದು ವೇಳೆ ಭಗವಂತ ನನಗೆ ಹೇಳಿದ್ದರೆ ... ನಾನು ಎಣ್ಣೆಯನ್ನು ಎಲ್ಲಿ ತರಬೇಕು, ಬಟ್ಟೆ ಎಲ್ಲಿ ಪಡೆಯಬೇಕು,
ಬೆಂಕಿಯನ್ನು ಎಲ್ಲಿಂದ ತರುವುದು, ಲಂಕೆಯನ್ನು ಸುಡುವುದು ಯಾವಾಗ! "ಆಲೋಚನೆಗಳ ಕೋಲಾಹಲದಲ್ಲಿ ಅವನು ಆಶ್ಚರ್ಯದಿಂದ ಮುಳುಗಿದನು.
ವಿಸ್ಮಯಕಾರಿ ಸಂಗತಿಯೆಂದರೆ ಎಲ್ಲಾ ವ್ಯವಸ್ಥೆಗಳನ್ನು ರಾವಣನೇ ಮಾಡಿದನು.
ರಾವಣನೊಂದಿಗೂ ಸಹ ತನ್ನ ಕೆಲಸ ಮಾಡಿಸಬಲ್ಲ ಅವನ ಒಡೆಯ  ರಾಮನು "*ಲಂಕೆಯನ್ನು ನೋಡಿ ಬಾ*" ಎಂದು ಮಾತ್ರ ಅಪ್ಪಣೆ ಕೊಟ್ಟದ್ದು ಆಶ್ಚರ್ಯವೇ ಸರಿ!
ಅದಕ್ಕಾಗಿಯೇ ಆತ್ಮೀಯ ಸ್ನೇಹಿತರೇ! ಒಂದನ್ನು ನೆನಪಿಟ್ಟುಕೊಳ್ಳಿ.
ಜಗತ್ತಿನಲ್ಲಿ ನಡೆಯುವ ಎಲ್ಲವೂ ದೇವರ ಪ್ರಕಾರ ಅವನ ಆಣತಿಯಂತೆ ಮಾತ್ರ ನಡೆಯುತ್ತದೆ. ನಾವೆಲ್ಲರು ಅದಕ್ಕೆ ತಕ್ಕಂತೆ ನಡೆಯುತ್ತೇವೆ. ನಾವೆಲ್ಲರೂ ಕೇವಲ ನಿಮಿತ್ತ ಮಾತ್ರ.
                        
                    
                    
                    
                    
                    
                                    
                                        
                                            🙏
                                        
                                    
                                    
                                        10