
Chief Minister Of Karnataka
June 17, 2025 at 02:23 PM
ಪರಿಸರವಿದ್ದರೆ ನಾವು. ನಮ್ಮ ಬದುಕು ಚೆನ್ನಾಗಿರಬೇಕೆಂದರೆ ಪರಿಸರ ಸಮೃದ್ಧವಾಗಿರಬೇಕು. ನಮ್ಮ ಜೀವದ ಸೆಲೆಯಾಗಿರುವ ಪರಿಸರಕ್ಕೆ ನಮ್ಮಿಂದ ಯಾವುದೇ ರೀತಿಯಲ್ಲಿ ಹಾನಿಯಾಗಬಾರದು ಎಂಬುದನ್ನು ಸದಾ ನೆನಪಿಟ್ಟುಕೊಂಡು ಜೀವಿಸಬೇಕು. ಈ ನಿಟ್ಟಿನ ಮೊದಲ ಹೆಜ್ಜೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದಾಗಿದೆ. ಹಾಗಾಗಿ ಎಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುತ್ತೇವೆ ಎಂಬ ಪಣ ತೊಡಬೇಕಿದೆ.
ಪರಿಸರ ರಕ್ಷಣೆ ಕುರಿತಾಗಿ ನಮ್ಮ ಸರ್ಕಾರವು ವಿಶೇಷ ಕಾಳಜಿ ವಹಿಸಿದೆ. ಇದಕ್ಕೆ ಪೂರಕ ಎಂಬಂತೆ ಈವರೆಗೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಜೊತೆಗೆ 2025-26ನೇ ಸಾಲಿನ ಬಜೆಟ್‌ನಲ್ಲೂ ಪರಿಸರ ಸಂರಕ್ಷಣೆಗೆ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ.
- ಮುಖ್ಯಮಂತ್ರಿ ಸಿದ್ದರಾಮಯ್ಯ
#karnatakagoesgreen
#reducereuserecycle
❤️
👍
🙏
😢
16