
ಗುರುಪ್ರಸಾದ್ ಆಚಾರ್ಯ ಕುಂಜೂರು
May 25, 2025 at 03:05 AM
ಪ್ರತಿಯೊಂದು ಕ್ರಿಯೆಯ ಹಿಂದೆ ಆಲೋಚನೆಯಿರುತ್ತದೆ ಮತ್ತು ಪ್ರತಿಯೊಂದು ಆಲೋಚನೆಯ ಹಿಂದೆ ಆಸೆ ಅಥವಾ ಇಚ್ಛೆ ಇರುವುದು.
“ಆಸೆ-ಆಲೋಚನೆ-ಕ್ರಿಯೆ' ಈ ಮೂರು ಎಳೆಗಳು ಹೊಸೆದುಕೊಂಡು ಕರ್ಮದ ಹಗ್ಗವಾಗಿದೆ. ನಮ್ಮ ಕ್ರಿಯೆಗಳು ನಮ್ಮ ಸುತ್ತಲಿನ ಜನರಿಗೆ ಸಂತೋಷವನ್ನೂ ಅಥವಾ ದುಃಖವನ್ನೂ ಕೊಡಬಹುದು. ಅವರಿಗೆ ಸಂತೋಷವನ್ನು ಕೊಟ್ಟರೆ, ನಾವು ಸಂತೋಷದ ಬೀಜವನ್ನು ಬಿತ್ತಿದಂತೆ: ಅದು ಬೆಳೆದು ನಮಗೆ ಸಂತೋಷವನ್ನೇ ಕೊಡುವುದು. ಇಲ್ಲವೆ, ಅವರಿಗೆ ದುಃಖವನ್ನು ಕೊಟ್ಟರೆ, ನಾವು ದುಃಖದ ಬೀಜವನ್ನು ಬಿತ್ತಿದಂತೆ: ಅದು ಬೆಳೆದು ನಮಗೆ ದುಃಖವನ್ನೇ ಕೊಡುವುದು. ಅಂತೆಯೇ ನಾವು ಕ್ರೂರಿಗಳಾಗಿದ್ದರೆ, ನಮಗೂ ಕ್ರೂರಫಲವೇ ದೊರಕುವುದು. ನಾವು ದಯಾಪರರಾಗಿ ದ್ದರೆ, ದಯೆಯ ಬೀಜವನ್ನು ಬಿತ್ತಿದಂತೆ: ಅದು ಬೆಳೆದು ನಮಗೂ ದಯೆಯೇ ದೊರಕುವುದು. ನಾವು ಕ್ರಿಯೆಯಿಂದ ಏನನ್ನು ಬಿತ್ತುತ್ತೇವೆಯೊ ಅದು ನಮಗೆ ಹಿಂದಿರುಗಿಬರುವುದು. ಇದು ಕರ್ಮ.
ಕೃತಿ : ಸನಾತನ ಧರ್ಮ
🙏
2