ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
May 25, 2025 at 07:30 AM
ನೆಚ್ಚಿಕೊಳ್ಳುವ ಪರಿ.. ಆಧುನಿಕತೆಗೆ ತೆರೆದುಕೊಂಡಂತೆಲ್ಲಾ ನಮ್ಮ ಭಾಂಧವ್ಯದ ಸರ್ಕಲ್ ಸಣ್ಣಸಣ್ಣದಾಗುತ್ತಲೇ ಇದೆ.. ನಾವು ತೀರಾ ಆತ್ಮೀಯರನ್ನಾಗಿಸುವುದು ಕೆಲವೇ ಕೆಲವು ಜನರನ್ನು ಮಾತ್ರ.. ಹಿಂದಿನ ಕಾಲದ ಬಾಂಧವ್ಯ ಸಂಬಂಧಿಗಳಲ್ಲೂ ವ್ಯಾಪಕವಾಗಿ ಹರಡಿತ್ತು.. ಈ ಕಾಲದಲ್ಲಿ ಎಲ್ಲರನ್ನೂ ನಾವು ಅನುಮಾನದ ದೃಷ್ಟಿಯಿಂದಲೇ ನೋಡುವುದು. " ಮೇಯಳಗನ್ " ಸಿನಿಮಾದಲ್ಲೊಂದು ಸನ್ನಿವೇಶವಿದೆ ನನ್ನನ್ನ ಬಹುವಾಗಿ ಕಾಡಿದ ಸನ್ನಿವೇಶ.. ಇಪ್ಪತ್ತು ವರುಷಗಳ ನಂತರ ಊರಿಗೆ ಬರುವ ನಾಯಕನಿಗೆ ಇನ್ನೊಬ್ಬ ನಾಯಕನ ( ಸಂಬಂಧಿ ) ಸರಿಯಾದ ಪರಿಚಯವಾಗದೇ ಆತನೊಂದಿಗೆ ಒಡನಾಟ ಏರ್ಪಡುತ್ತದೆ. ಅದೆಷ್ಟು ಬಾರಿ ಬೇರೆ ಬೇರೆ ಜನರ ಬಳಿ ಆತ ಯಾರು..? ಅಂತ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾನಾದರೂ ಆತನ ಪ್ರಯತ್ನ ಫಲ ನೀಡುವುದಿಲ್ಲ. ಕೊನೆಗೆ ತನ್ನ ಹೆಸರನ್ನ ಕೂಗಿ ಕರೆಯಬೇಕು ಅನ್ನುವ ದ್ವೀತಿಯ ನಾಯಕನ ಮಾತು ಕೇಳಿ ಒಳಗೊಳಗೆ ತೀರಾ ಹಿಂಸೆ ಅನುಭವಿಸುವ ನಾಯಕ ದ್ವಿತೀಯ ನಾಯಕನ ಮನೆಯಿಂದ ಹೇಳದೆ ಕೇಳದೆ ಓಡಿ ತನ್ನೂರಿಗೆ ಹೋಗಿ ಬಿಡುತ್ತಾನೆ... ಕಾಲ ಕಳೆಯುತ್ತದೆ ನಗರಕ್ಕೆ ಬಂದ ನಾಯಕ ದ್ವಿತೀಯ ನಾಯಕನ ಜತೆ ಮಾತೇ ಆಡುವುದಿಲ್ಲ.. ಹಾಗೆ ಕಾಲ ಸಾಗಿ ನಾಯಕ ನಗರದಲ್ಲಿ ತಾನಿರುವ ಮನೆಯನ್ನ ಖರೀಸಲು ಪ್ರಯತ್ನ ಪಡುತ್ತಾ ತನ್ನ ಮನೆ ಕೊಳ್ಳಲು ಬೇಕಾದಷ್ಟು ಹಣದ ಅರೇಂಜ್ ಮಾಡಿಕೊಂಡಿರುವ ಹೊತ್ತಲ್ಲೇ ಮಗಳ ಕಾರಣದಿಂದ ದ್ವಿತೀಯ ನಾಯಕನಿಗೆ ಕಾಲ್ ಮಾಡಿದಾಗ ಆತ ಮಾತನಾಡುತ್ತಾ ಮಾತನಾಡುತ್ತಾ.. " ನಿಮಗೆ ಅದೇನೋ ಮನೆ ಖರೀದಿಗೆ ಹಣ ಬೇಕಂತಲ್ವಾ.. ನನ್ನ ಬಳಿ ಹದಿನೈದು ಲಕ್ಷ ಇದೆ.. ನನ್ನ ಹೆಂಡತಿ ಒಡವೆ ಅಡವಿಟ್ಟರೆ.. ಇಂತಿಷ್ಟು ಸಿಗುತ್ತದೆ.. " ಅಂತೆಲ್ಲಾ ತನ್ನದೇ ಸಮಸ್ಯೆ ಎನ್ನುವಂತೆ ಮಾತನಾಡುತ್ತಾನೆ... ಅತ್ತ ನಾಯಕ ನನಗೆ ಹಣದ ಆವಶ್ಯಕತೆ ಇಲ್ಲ ಅಂದರೂ ಈತ ತನ್ನಿಂದ ಹಣ ತೆಗೆದುಕೊಳ್ಳಲೇಬೇಕು ಅಂತೆಲ್ಲಾ ಮಾತನಾಡುವ ಸನ್ನಿವೇಶ.. ನಿಜಕ್ಕೂ ನನ್ನನ್ನ ಕಾಡಿತ್ತು.. ಸಾಮಾನ್ಯವಾಗಿ ಯಾವುದೋ ದೂರದ ಸಂಬಂಧಿ ನಮಗೆ ಕಾಲ್ ಮಾಡಿದ ಕೂಡಲೇ ನಮ್ಮ ತಲೆಯೊಳಗೆ ಓಡುವುದೇ... " ಇವನ್ಯಾಕೆ ಕಾಲ್ ಮಾಡಿದ..? ಹಣ ಏನಾದರೂ ಬೇಕಾಗಿತ್ತಾ..? ಹೇಗಪ್ಪಾ ಇವನನ್ನ ಸಾಗಹಾಕೋದು " ಅಂತ ಒದ್ದಾಡುತ್ತೇವೆ.. ಆದರೆ ಸನ್ನಿವೇಶದಲ್ಲಿ ನಾಯಕನಿಗೊದಗಿದ ಪರಿಸ್ಥಿತಿ ನೋಡಿ... ಮೊದಲೇ ಆತನ ಪರಿಚಯ ತನಗೆ ಸರಿಯಾಗಿ ಆಗಿಲ್ಲ ಅನ್ನುವ ಭಾವದ ಜತೆಗೇ.. ದ್ವಿತೀಯ ನಾಯಕನಿಗೆ ಹೇಳದೆ ಕೇಳದೆ ವಾಪಾಸು ಬಂದು.. ಕಾಲ್ ಮಾಡಿ ಮಾತನಾಡುವುದಾದರೂ ಯಾವಾಗ ಹಣ ಅರೇಂಜ್ಮೆಂಟ್ ನಡೆಯುತ್ತಿರುವಾಗ... ಆತ ಏನೆಂದು ಕೊಂಡಾನೋ ಅನ್ನುವ ಭಾವ ಒಂದೆಡೆಯಾದರೆ ಇಂತಹಾ ಸಮಯದಲ್ಲಿ ಕಾಲ್ ಮಾಡಿದ್ದರ ಕುರಿತಾಗಿ ಆತ ಏನೆಂದುಕೊಳ್ಳುತ್ತಾನೋ ಅನ್ನುವ ಭಾವ ಇನ್ನೊಂದು ಕಡೆ... ಆದರೆ ಅದಕ್ಕೆ ತದ್ವಿರುದ್ಧವಾಗಿ ದ್ವಿತೀಯ ನಾಯಕ ಹಣಕ್ಕಾಗುವಾಗ ಕಾಲ್ ಮಾಡಿದ ಎನ್ನುವ ದೃಷ್ಟಿಯಿಂದ ಯೋಚಿಸದೆ ತನ್ನ ಉಳಿಕೆಯ ಹಣವನ್ನೂ, ಹೆಂಡತಿಯ ಒಡವೆಯನ್ನೂ ಅಡವಿಡಲು ತಯಾರಾಗುತ್ತಾನೆಂದರೆ ಆತನ ವ್ಯಕ್ತಿತ್ವ ಎಂತಹಾ ಶ್ರೇಷ್ಠ ಮಟ್ಟದ್ದು..? ನಿಜವೇ ಈ ಕಾಲಕ್ಕೆ ಅಂತಹಾ ಬಾಂಧ್ಯವ್ಯ ಕಂಡು ಬರುವುದು ಕಷ್ಟವೇ ಹೌದಾದರೂ ಅದೆಂತಹಾ ಭಾವ ಅಲ್ವಾ.. ಒಬ್ಬ ವ್ಯಕ್ತಿಯನ್ನ ಅಷ್ಟು ಉನ್ನತ ಸ್ಥರದಲ್ಲಿ ಇರಿಸಿ ಗೌರವಿಸುತ್ತಾ ಅಥವಾ ಪ್ರೀತಿಸದ ಹೊರತು ನಮ್ಮೊಳಗೆ ಈ ರೀತಿಯ ತ್ಯಾಗ ಮನೋಭಾವ ಬಾರದು ಅಲ್ವೇ..???
👍 ❤️ 😢 5

Comments