
ಗುರುಪ್ರಸಾದ್ ಆಚಾರ್ಯ ಕುಂಜೂರು
May 28, 2025 at 09:44 AM
ಅಂತರಾಳದಿಂದ
ವಿಕ್ರಮ ಪತ್ರಿಕೆಯ ಅಂಕಣಕಾರರಾದ Ramesha Doddapura ಅವರೊಂದು ಪೋಸ್ಟ್ ಶೇರ್ ಮಾಡಿದ್ದರು... ಶನೇಶ್ವರ ದೇವಸ್ಥಾನದಲ್ಲಿ ಭಕ್ತರು ಹ್ಯಾಪಿ ಬರ್ತ್ ಡೇ ಶನೀಶ್ವರ ಅಂತ ಘೋಷಣೆ ಕೂಗುತ್ತಾ ಶನಿಜಯಂತಿ ಆಚರಿಸಿದ ಬಗೆಗಿನ ಪೋಸ್ಟ್.. . ಓದಿದ ಹಾಗೆ ಅನಿಸಿದ್ದು .. ಜನರ ಭಾವನೆಯನ್ನೇ ಪ್ರಧಾನವಾಗಿ ನೋಡಿದರೆ ಶನಿಜಯಂತಿಯನ್ನ ಯಾವ ಭಾಷೆಯಲ್ಲಾದರೂ ಆಚರಿಸಲಿ.. ಜನರ ಭಾವ ಮುಖ್ಯ ಅಂತಂದುಕೊಂಡು ಸುಮ್ಮನಿದ್ದು ಬಿಡಬಹುದು.. ಆದರೆ ಇನ್ನೊಂದು ಆಯಾಮದಲ್ಲಿ ನೋಡಿದರೆ... ಇದೇ ಹವ್ಯಾಸ ಮುಂದುವರಿದು ಅಲ್ಲೊಂದು ಕಡೆ ಮಾಡಿದ್ದಾರೆ.. ನಾವೂ ಮಾಡಬಹುದು ಎನ್ನುವ ಧೈರ್ಯ ಮೂಡಿದಲ್ಲಿ... ಮುಂದಿನ ದಿನಗಳು ಹೇಗಾದೀತು..? ಈಗಲೇ ಮನೆಯಲ್ಲಿ ಜ್ಮದಿನವೆಂದರೆ " ಹ್ಯಾಪಿ ಬರ್ತ್ ಡೇ ಟೂ ಯೂ ಎಂದು ಹಾಡುತ್ತಾ ಕೇಕ್ ಕಟ್ " ಮಾಡುವುದು ನಮ್ಮ ಹಿಂದೂ ಸಂಪ್ರದಾಯದ್ದೇ ಅವಿಭಾಜ್ಯ ಅಂಗ ಎನ್ನುವ ಭಾವನೆ ಇದೆ.. ಇದು ಮಂದಿರಕ್ಕೂ ಆವರಿಸಲ್ಪಟ್ಟರೆ ನಮ್ಮ ನೈಜ ಸಂಪ್ರದಾಯಗಳು ಉಳಿದು ಬೆಳೆಯುವುದಾದರೂ ಎಲ್ಲಿ...? ಅದಲ್ಲದೆ ಅವರು ಶೇರ್ ಮಾಡಿದ ಚಿತ್ರದಲ್ಲಿ ಕನಿಷ್ಠ ಮೂವತ್ತು ನಲುವತ್ತು ಜನಗಳಿದ್ದರೂ.. ಅವರಲ್ಲಿ ಯಾರೊಬ್ಬರೂ ಇದನ್ನ ತಡೆಯದೆ ಇರುವುದು ಮತ್ತೊಂದು ಸೋಜಿಗ.. ಅಂದರೆ ಅಷ್ಟೂ ಜನಕ್ಕೆ ಇದು ಉಚಿತವಲ್ಲ ಎನ್ನುವ ಭಾವ ಮೂಡಿಲ್ಲ ಅನ್ನುವುದೂ ಸ್ಪಷ್ಟ.. ಅಲ್ವೇ ಹಿಂದೂಗಳಿಗೆ ಭಾರತ ದೇಶ ಹೇಗೆ ಒಂದೇ ಒಂದು ಆಶ್ರಯತಾಣವೋ... ಹಾಗೇ ಹಿಂದೂ ಸಂಪ್ರದಾಯಗಳಿಗೆ ಹಿಂದೂ ಮನೆಗಳೇ ಆಶ್ರಯತಾಣ ನಮ್ಮ ಮನೆ ಮಂದಿರಗಳಲ್ಲಿ ನಮ್ಮ ಸಂಪ್ರದಾಯಗಳು ಉಳಿಯದೇ ಹೋದರೆ ಅವುಗಳು ಮುಂದಿನ ಪೀಳಿಗೆಗೆ ಮುಂದುವರಿಯುವುದಾದರೂ ಹೇಗೆ...??
👍
🙏
2