
ಗುರುಪ್ರಸಾದ್ ಆಚಾರ್ಯ ಕುಂಜೂರು
May 28, 2025 at 12:14 PM
ಪ್ರವಚನಾಮೃತ...
ಈ ದೇಹ ಪಂಚಭೂತಗಳಿಂದಾದದ್ದು.. ಈ ದೇಹಕ್ಕೆ ಅದರದ್ದೇ ಆದ ಒಂದು ಪರಿಮಿತಿ ಇದ್ದೇ ಇರುತ್ತೆ... ಯಾವ ರೀತಿಯಲ್ಲಿ ಒಂದು ಮಡಕೆಯಲ್ಲಿ ಇಂತಿಷ್ಟೇ ನೀರು ಹಿಡಿಯಲು ಸಾಧ್ಯವೋ ಅಂತೆಯೇ ಒಂದು ದೇಹದಲ್ಲೂ ಇಂತಿಷ್ಟೇ ಪುಣ್ಯದ ಶಕ್ತಿಯನ್ನ ಹಿಡಿದಿಟ್ಟುಕೊಳ್ಳಲು ಸಾಧ್ಯ... ಅದಕ್ಕಿಂತಲೂ ಜಾಸ್ತಿ ಹಾಕಿದಾಗ ಒಂದೋ ಅದು ಹೊರಚೆಲ್ಲುತ್ತದೆ... ಅಥವಾ ಅದು ಆ ದೇಹಕ್ಕೆ ಮಾರಕವಾಗಬಹುದು, ಯಾವ ರೀತಿ ಅಂದರೆ ಇಂತಿಷ್ಟೇ ವ್ಯಾಟಿನ ಬಲ್ಬಿನಲ್ಲಿ ಅದಕ್ಕಿಂತಲೂ ಜಾಸ್ತಿ ವ್ಯಾಟ್ ವಿದ್ಯುತ್ ಹರಿಸಿದರೆ ಏನಾದೀತು ಹೇಳಿ... ಒಡೆದುಹೋಗುವುದು ತಾನೆ. ಹಾಗೆಯೇ ಮನುಷ್ಯನೂ ತನ್ನ ಜನ್ಮಜನ್ಮಾಂತರಗಳ ಈ ಚಕ್ರದಲ್ಲಿ ಒಟ್ಟಾರೆಯಾಗಿ ಇಂತಿಷ್ಟೇ ಶಕ್ತಿ ಸಂಪಾದನೆ ಮಾಡಬಲ್ಲ... ಒಂದು ಜನ್ಮದಲ್ಲಿ ಪುಣ್ಯ ಅತಿಯಾದರೆ ಇನ್ನೊಂದು ಜನ್ಮದಲ್ಲಿ ಪುಣ್ಯ ಕಡಿಮೆಯಾಗಬಹುದು... ಇದಕ್ಕೆ ಉದಾಹರಣೆಯಾಗಿ ನೋಡೋದಾದರೆ ತ್ರೇತಾಯುಗದಲ್ಲಿ ವಾಲಿಯಾಗಿ ಶ್ರೀರಾಮನ ವಿರೋಧ ಕಟ್ಟಿಕೊಂಡಾತ ದ್ವಾಪರಯುಗದಲ್ಲಿ ಅರ್ಜುನನಾಗಿ ಪುಣ್ಯ ಸಂಪಾದನೆ ಮಾಡಿದ. ಅದೇ ಸುಗ್ರೀವನಾಗಿ ತ್ರೇತಾಯುಗದಲ್ಲಿ ಪುಣ್ಯ ಸಂಪಾದಿಸಿದಾತ ದ್ವಾಪರಯುಗದಲ್ಲಿ ಕರ್ಣನಾಗಿ ಪಾಪ ಕಟ್ಟಿಕೊಳ್ಳುತ್ತಾನೆ... ಒಟ್ಟಾರೆಯಾಗಿ ನಿಮ್ಮ ಪಾಪ ಪುಣ್ಯವು ಯಾವಾಗ ಸಮವಾಗುವುದೋ ಆವಾಗ ಆ ಜೀವಕ್ಕೆ ಮುಕ್ತಿ ಹೊಂದುವ ಭಾಗ್ಯವಂತೆ... ಸ್ವಲ್ಪ ಪುಣ್ಯ ಮಾಡಿದ್ದರೂ ಅದರ ಫಲಾನುಭವ ಅನುಭವಿಸಲು ನಾವು ಹುಟ್ಟಬೇಕು ಮತ್ತು ಪಾಪ ಮಾಡಿದ್ದರೂ ಅದರ ಶಿಕ್ಷೆ ಅನುಭವಿಸಲು ಈ ಭೂಮಿಗೆ ಬರಲೇ ಬೇಕು.
---ಕೆ.ಗುರುಪ್ರಸಾದ್
ಬನ್ನಂಜೆಯವರ ಪ್ರವಚನ ಮಾಲಿಕೆಯಿಂದ ಮತ್ತು ಒಂದಷ್ಟು ಓದಿದ ಸಾಲುಗಳಿಂದ
🙏
1