ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
May 28, 2025 at 01:25 PM
ವೀರ ಸಾವರ್ಕರರ ಜೀವನಗಾಥೆಯ ಪುಸ್ತಕವಾದ " ಆತ್ಮಾಹುತಿ " ಕೃತಿಯನ್ನು ಓದಿದ್ದೆನಾದರೂ ಸಾವರ್ಕರರ ಬಗೆಗಿನ ಅಭಿಮಾನ ನನ್ನೊಳಗೆ ಪ್ರಬಲವಾದದ್ದು Ajakkala Girisha Bhat ಅವರ " ಬಹುವಚನಕ್ಕೊಂದೇ ತತ್ತ್ವ ಏಕತ್ವ ಅನೇಕತ್ವಗಳ ಹಿಂದುತ್ವ " ಅನ್ನುವ ಕೃತಿಯನ್ನ ಓದಿದ ಬಳಿಕವೇ.. ಅಲ್ಲಿ ಅವರು ಚರ್ಚಿಸುವ ಸಾವರ್ಕರ ವಿಚಾರಧಾರೆಯನ್ನ ಓದಿದಾಗಲೇ ವೀರ ಸಾವರ್ಕರರ ವ್ಯಕ್ತಿತ್ವ ಎಂತಾದ್ದು..? ಅನ್ನುವುದು ಗೊತ್ತಾದದ್ದು.. ಅವರ ದೂರದೃಷ್ಟಿ ಎಂತಾದ್ದು..? ಅನ್ನುವುದು ಗೊತ್ತಾದದ್ದು.. ಸಾವರ್ಕರರ ವ್ಯಕ್ತಿತ್ವ ಸ್ಪಷ್ಟವಾಗಿ ಅರಿವಾಗುವಲ್ಲಿ ಅಜಕ್ಕಳ ಗಿರೀಶ್ ಭಟ್ರ ಕೃತಿ ಪ್ರಧಾನ ಪಾತ್ರ ವಹಿಸಿತು.. ಬಹುಶಃ ಅದನ್ನ ಪ್ರಸ್ತುತ ಪಡಿಸಿದ ರೀತಿಯಿಂದಾಗಿ ಸಾವರ್ಕರರ ವಿಚಾರಧಾರೆ ಸ್ಪಷ್ಟವಾಗಿ ಅರ್ಥವಾಯಿತು ಅಂತಲೇ ಹೇಳಬಹುದು ಆ ಕೃತಿಯಲ್ಲಿ ಬರುವ ಒಂದಷ್ಟು ಪ್ರಮುಖ ಸಾಲುಗಳು ಹೀಗಿವೆ... ( ಇದು ಬೆರಳೆಣಿಕೆಯಷ್ಟು ಮಾತ್ರ ಇನ್ನಷ್ಟು ವಿಚಾರ ಗೊತ್ತಾಗಬೇಕಾದಲ್ಲಿ ಕೃತಿಯನ್ನೇ ಓದುವುದೊಳಿತು ) ೧. ನೀವು ಸಾವರ್ಕರರನ್ನು ಒಪ್ಪಬಹುದು ಅಥವಾ ವಿರೋಧಿಸಬಹುದು ಆದರೆ ಅಲಕ್ಷಿಸಲು ಸಾಧ್ಯವಿಲ್ಲ. ಇಪ್ಪತ್ತನೆಯ ಶತಮಾನದ ಭಾರತದ ಚರಿತ್ರೆಯಲ್ಲಿ ಅವರ ಪಾತ್ರ ಬಹಳ ಮಹತ್ತ್ವದ್ದು. ಅದರಲ್ಲೂ ಹಿಂದುತ್ವದ ಕುರಿತು ಯಾವುದೇ ಜಿಜ್ಞಾಸೆಯೂ ಅವರನ್ನು ಗಣನೆಗೆ ತೆಗೆದುಕೊಳ್ಳದೆ ಮುಂದೆ ಹೋಗದು. ೨. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕಿರಬೇಕು ಎಂದು ವಾದಿಸಿದ್ದ ಸಾವರ್ಕರ್ ಕುರಿತಾಗಿ ' ಮುಸ್ಲಿಮರಿಗೆ ಸಮಾನ ಹಕ್ಕನ್ನು ನಿರಾಕರಿಸಿದವರು ' ಎಂಬ ಸುಳ್ಳನ್ನು ಅಂದಿನಂತೆ ಇಂದೂ ಪುನರುಚ್ಚರಿಸಲಾಗುತ್ತಿದೆ. ೩. ಹಿಂದುಗಳ ಅನನ್ಯತೆಯನ್ನು ಹಾಗೂ ಒಗ್ಗಟ್ಟಾಗುವ ಅಗತ್ಯವನ್ನು ಒಂದು ನಿರ್ದಿಷ್ಟ ಸನ್ನಿವೇಶದ ಅನಿವಾರ್ಯ ಸಂಗತಿಗಳಾಗಿ ಸಾವರ್ಕರ್ ಕಾಣುತ್ತಾರೆ ಹೊರತು ಅದು ಅವರ ಆದರ್ಶ ಅಲ್ಲವೇ ಅಲ್ಲ. ಅಲ್ಲದೆ ಅವರು ಹಿಂದುಗಳ ಒಗ್ಗಟ್ಟಿನ ಅಗತ್ಯವನ್ನು ಹೇಳಿದರಾದರೂ ಹಿಂದುಗಳೊಳಗಿನ ಬಹುತ್ವವನ್ನ ಬಿಟ್ಟುಬಿಡಲು ಹೇಳಲಿಲ್ಲ. ೪. ಧಾರ್ಮಿಕರಾಗಿರದೆ ಇದ್ದವರಿಗೂ ಯಾವುದು ಬಹುತ್ವವನ್ನು ಉಳಿಸುತ್ತದೆ; ಯಾವುದು ಅಳಿಸುತ್ತದೆ ಎಂದು ಗೊತ್ತಿರಬೇಕು. ಸಾವರ್ಕರರಿಗೆ ಅದು ಗೊತ್ತಿತ್ತು. ೫. ಸಾವರ್ಕರರು ಪ್ರತಿಪಾದಿಸಿದ್ದು ಹಿಂದುತ್ವದ ಬಹುತ್ವವನ್ನು ಉಳಿಸಿಕೊಳ್ಳಲು ಬೇಕಾದ ಜಾಗೃತಿಯನ್ನು ಮತ್ತು ರಕ್ಷಣಾತ್ಮಕ ಕಾರ್ಯತಂತ್ರವನ್ನು. ೬. ತೀಕ್ಷ್ಣಮತಿಗಳಾದವರು ಮುಂದೆ ಆಗಬಹುದಾದ ಆಕ್ರಮಣದ ಅಪಾಯವನ್ನು ಇತರರಿಗಿಂತ ಮೊದಲೇ ಮನಗಾಣುತ್ತಾರೆ. ಅದಕ್ಕೆ ಬೇಕಾದ ರಕ್ಷಣಾತಂತ್ರಗಳ ಬಗ್ಗೆ ಯೋಚಿಸುತ್ತಾರೆ. ಆದರೆ ಆಕ್ರಮಣಕಾರರ ಪರವಾಗಿರುವವರಿಗೆ ಅಥವಾ ಅಂತಹ ಆಕ್ರಮಣದ ಅಪಾಯವನ್ನೇನೂ ಗ್ರಹಿಸಲಾರದವರಿಗೆ ರಕ್ಷಣಾತ್ಮಕ ತಂತ್ರಗಳನ್ನು ಹೇಳುವವರ ಬಗ್ಗೆ ಸಿಟ್ಟು ಬೇಸರ ಸಹಜ. ರಕ್ಷಣೆಯ ಬಗ್ಗೆ ಚಿಂತಿಸುವವರು ಅಸಹಿಷ್ಣುಗಳಾಗಿ ಅಥವಾ ಜಗಳಗಂಟರಾಗಿ ಕಾಣುವುದೂ ಸಹಜ. ವಾಸ್ತವವಾಗಿ ಸಾವರ್ಕರರದು ಆಕ್ರಮಣವಲ್ಲ, ಅವರದು ಆಕ್ರಮಣವನ್ನು ಎದುರಿಸಬೇಕಾದ ರಕ್ಷಣಾತ್ಮಕ ಯತ್ನಗಳ ಬಗ್ಗೆ ಚಿಂತನೆ. ೭. ಒಂದು ಸಮುದಾಯವಾಗಿ ಹಿಂದುಗಳಿಗಿಂತ ಹೆಚ್ಚಿನ ಹಕ್ಕು ಮುಸ್ಲಿಮರಿಗಿರಬಾರದು ಎಂದು ಸಾವರ್ಕರ್ ಹೇಳಿದ್ದರೇ ಹೊರತು ಮುಸ್ಲಿಂ ವ್ಯಕ್ತಿಗಳಿಗೆ ಹಿಂದೂಗಳಿಗೆ ಇರುವಷ್ಟೇ ಹಕ್ಕು ಸಮಾನವಾಗಿ ಇರಬಾರದು ಅಂತ ಹೇಳಿರಲಿಲ್ಲ. ೮. ವ್ಯಕ್ತಿಗಳ ನಡುವೆ ಸಮಾನತೆಯನ್ನು ಪ್ರತಿಪಾದಿಸಿದ ಸಾವರ್ಕರರ ಮೇಲೆ 'ಮುಸ್ಲಿಂ ದ್ವೇಷಿ' ಎನ್ನುವ ಆರೋಪ ಅಂದಿನಿಂದ ಇಂದಿನವರೆಗೂ ಹಾಗೆಯೇ ಇದೆ. ಅವರು ಮುಸ್ಲಿಮರಿಗೆ ಸಮಾನ ಅಧಿಕಾರವನ್ನು ನಿರಾಕರಿಸಿದವರು ಎಂದು ಅನೇಕ ಮಂದಿ ಈಗಲೂ ವ್ಯಾಖ್ಯಾನಿಸುತ್ತಲೇ ಇದಾರೆ ಅದು ಗಣಿತ ಗೊತ್ತಿಲ್ಲದವರ ಸಮಸ್ಯೆ. ೭೫ ಮಂದಿಯ ಗುಂಪಿಗೆ ಕೊಡುವಷ್ಟನ್ನೇ ಸಮವಾಗಿ ೨೫ ಮಂದಿಯ ಗುಂಪಿಗೂ ಕೊಡಬೇಕೆನ್ನುವ ತರ್ಕವನ್ನು ಸಾವರ್ಕರ್ ಒಪ್ಪಲಿಲ್ಲ. ಇದನ್ನೇ ಸಮಾನತೆಯ ನಿರಾಕರಣೆ ಎಂದು ಆರೋಪಿಸುವುದು. ಅವರು ನೂರು ಮಂದಿಗೂ ಸಮನಾಗಿ ಹಂಚಿ ಎಂದರು ಅಷ್ಟೇ. ಅಂತಹಾ ವೀರ ಸ್ವಾತಂತ್ರ್ಯ ಯೋಧನ ಜನ್ಮದಿನವಿಂದು.. ಅವರಿಂದ ನಾವು ಪ್ರಧಾನವಾಗಿ ಕಲಿಯಬೇಕಾದುದು ರಕ್ಷಣಾತ್ಮಕ ನಡೆ.. ಪ್ರತಿಯೊಬ್ಬ ಹಿಂದೂವಿಗೂ ಅವರ ವಿಚಾರಧಾರೆ ಅರಿವಿಗೆ ಬರಲಿ.. ಎನ್ನುವುದೇ ಈ ಹೊತ್ತಿನ ನನ್ನ ಹಾರೈಕೆ..
Image from ಗುರುಪ್ರಸಾದ್ ಆಚಾರ್ಯ ಕುಂಜೂರು: ವೀರ ಸಾವರ್ಕರರ ಜೀವನಗಾಥೆಯ ಪುಸ್ತಕವಾದ " ಆತ್ಮಾಹುತಿ " ಕೃತಿಯನ್ನು ಓದಿದ್ದೆನಾದರೂ ...
🙏 ❤️ 4

Comments