
ಗುರುಪ್ರಸಾದ್ ಆಚಾರ್ಯ ಕುಂಜೂರು
May 29, 2025 at 12:52 PM
ಸಿನಿಮಾ ನಾ ಕಂಡಂತೆ - ದ ಡಿಪ್ಲೋಮ್ಯಾಟ್
ನೈಜ ಘಟನೆಯಾಧಾರಿತ ಸಿನಿಮಾ.. ಉಜ್ಮಾ ಅಹ್ಮದ್ ಎನ್ನುವ ಮಹಿಳೆ, ಪಾಕಿಸ್ತಾನಿ ವ್ಯಕ್ತಿಯ ಮೋಹ ಪಾಶಕ್ಕೆ ಬಲಿಯಾಗಿ ಪಾಕಿಸ್ತಾನವೆಂಬ ನರಕದಲ್ಲಿ ಯಮಯಾತನೆ ಪಟ್ಟು ಅಲ್ಲಿಂದ ಮರಳಿ ಭಾರತಕ್ಕೆ ಬರಲು ಪ್ರಯತ್ನ ಪಡುವ ಕತೆ.. ಈ ಪ್ರಯತ್ನದಲ್ಲಿ ಆಕೆ ಸಫಲಳಾಗುತ್ತಾಳೆ ಅನ್ನುವುದು ಘಟನೆಯ ಕುರಿತು ಓದಿ ತಿಳಿದುಕೊಂಡಿರುವ ಅನೇಕರಿಗೆ ಗೊತ್ತಿರಬಹುದಾದರೂ ಆ ಪಯಣ ಹೇಗಿತ್ತು ಅನ್ನುವುದನ್ನ ರೋಚಕವಾಗಿ ತೋರಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಇಂಡಿಯನ್ ಹೈಕಮಿಷನ್ ನ ಸಿಬ್ಬಂದಿಗಳು ಒಬ್ಬ ಭಾರತೀಯ ಹೆಣ್ಣು ಮಗಳನ್ನ ಮರಳಿ ತಾಯ್ನಾಡಿಗೆ ಸೇರಿಸುವಲ್ಲಿ ಮಾಡುವ ಪ್ರಯತ್ನ ನಿಜಕ್ಕೂ ಮೆಚ್ಚುಗೆಗೆ ಪಾತ್ರವನ್ನಾಗಿಸುತ್ತದೆ. ಜತೆಗೆ ಅಂದಿನ ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಅವರ ಮುತುವರ್ಜಿ.. ಅಬ್ಬಾ... ಕೇವಲ ಒಬ್ಬ ಭಾರತೀಯ ಹೆಣ್ಣು ಮಗಳ ರಕ್ಷಣೆಗಾಗಿ ಭಾರತೀಯ ಹೈಕಮಿಷನ್ ಭಾರತದ ವಿದೇಶ ಮಂತ್ರಾಲಯ ಪಟ್ಟ ಪರಿಶ್ರಮ ನಿಜಕ್ಕೂ ಗೌರವದ ಭಾವ ಮೂಡಿಸುತ್ತದೆ...
ಸಿನಿಮಾ ನೋಡಿದಾಗ ಅನಿಸಿದ್ದು.. ಭಾರತೀಯ ಮುಸ್ಲಿ ಮಹಿಳೆಯರಿಗೆ ಪಾಕಿಸ್ತಾನದ ವ್ಯಕ್ತಿಗಳನ್ನ ವರಿಸುವಾಗ ಅಥವಾ ಪ್ರೀತಿಸುವಾಗ ಎಳ್ಳಷ್ಟೂ ಹಿಂಜರಿಕೆ ಇಲ್ಲವೇನೋ ಅಂತ. ಸಹಜವಾಗಿ ಅಲ್ಲಿನ ವ್ಯಕ್ತಿಯ ಮೋಸಕ್ಕೆ ಬಲಿಯಾಗಿ ಬಿಡುತ್ತಾಳೆ ಚಿತ್ರದ ನಾಯಕಿ... ಆಕೆ ಪಡುವ ಕಷ್ಟವನ್ನ ಬಹುಷಃ ಭಾರತದ ಪ್ರತಿಯೊಬ್ಬ ಮುಸ್ಲಿಮ್ ಜನರೂ ನೋಡಬೇಕು.. ಮುಸ್ಲಿಮರಾಗಿದ್ದರೂ ಅಲ್ಲಿ ಅವರಿಗೆ ಸಿಗುವ ಬೆಲೆ ಏನು ಅನ್ನುವ ಅರಿವು ಇಲ್ಲಿನ ಜನರಿಗೆ ಆಗುವುದು ನಿಜಕ್ಕೂ ಈ ಕಾಲದ ಅಗತ್ಯತೆ.. ಆಕೆ ಅನುಭವಿಸಿದ ಕಷ್ಟದ ಸರಮಾಲೆಯಿಂದಲೇ ಆಕೆ ಭಾರತಕ್ಕೆ ಮರಳುವಾಗ ಮೊದಲು ಇಲ್ಲಿನ ಮಣ್ಣಿಗೆ ನಮಸ್ಕಾರ ಮಾಡುತ್ತಾಳೆ.. ಆ ಕಾಲಕ್ಕೆ ಆಕೆ ಹಿಂದೂ ಆಗಿಯೇ ಪರಿವರ್ತಿತಳಾದಳೋ ಎನ್ನುವಂತೆ ಈ ಭೂಮಿಯನ್ನ ತಾಯಿಯಂತೆ ಕಂಡು ಈ ಮಣ್ಣಿಗೆ ನಮಸ್ಕರಿಸುವ ದೃಶ್ಯ ನಮ್ಮನ್ನ ಭಾವುಕರನ್ನಾಗಿಸುತ್ತದೆ. ಸಿನಿಮಾ ಅಲ್ಲಿನ ಮುಸ್ಲಿಂ ಧರ್ಮಾಂದರು ಹೇಗೆ ನಡೆದುಕೊಳ್ಳುತ್ತಾರೆ ಅನ್ನುವುದನ್ನ ತೋರಿಸುವುದಲ್ಲದೆ ಅಲ್ಲಿನ ಐ.ಎಸ್.ಐ ಎಷ್ಟೆಲ್ಲಾ ಮಸಲತ್ತು ಮಾಡುತ್ತದೆ ಅನ್ನುವುದನ್ನೂ ತೋರಿಸುತ್ತದೆ.. ಜತೆಗೆ ಆಕೆಯ ಪರವಾಗಿ ವಾದಿಸುವಂತಹಾ ಲಾಯರ್ ಪಾತ್ರಧಾರಿಯಂತಹ ಸಜ್ಜನರೂ ಆ ದೇಶದಲ್ಲಿ ಇದ್ದಾರೆ ಎನ್ನುವುದನ್ನೂ ಚಿತ್ರ ಮುಚ್ಚುಮರೆಯಿಲ್ಲದೆ ಇದ್ದದ್ದನ್ನ ಇದ್ದಂತೆ ತೋರಿಸುತ್ತದೆ... ಸಿನಿಮಾ ಶೀರ್ಷಿಕೆಯಂತೆ ಪಾಕಿಸ್ತಾನದ ಹೈಕಮಿಶನ್ ಅಧಿಕಾರಿ ಜೆ.ಪಿ.ಸಿಂಗ್ ತೋರುವ ಜಾಣ್ಮೆ ಅದ್ಭುತ..
ಸಿನಿಮಾದ ಚಿತ್ರಕತೆ ಸೊಗಸಾಗಿದೆ, ನಟನೆ ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ ನಿರ್ದೇಶನವೂ ಉತ್ತಮವಾಗಿದೆ.. ಒಟ್ಟಿನಲ್ಲಿ ಭಾರತೀಯರು ನೋಡಲೇಬೇಕಾದ ಸಿನಿಮಾ ಕಾರಣ ಪಾಕಿಸ್ತಾನದ ಅಧಿಕಾರಿಗಳ ಮತ್ತು ಅಲ್ಲಿನ ಮತಾಂಧರ ಮನಸ್ಥಿತಿಯ ಅನಾವರಣ ಈ ಸಿನಿಮಾದಲ್ಲಾಗಿದೆ.. ಒಮ್ಮೆ ನೋಡಿ ಬಿಡಿ..

👍
🙏
3