ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
May 30, 2025 at 09:14 AM
ಬುದ್ಧಿವಂತೆ... ಅದ್ಯಾವುದೋ ಕಾರಣಕ್ಕಾಗಿ ಕಾರನ್ನ ವೇಗವಾಗಿ ಚಲಾಯಿಸುತ್ತಿದ್ದಳು.. ವೇಗ ಎಷ್ಟಿತ್ತೆಂದರೆ ಆ ಹಾದಿಯಲ್ಲಿ ಚಲಾಯಿಸಬಹುದಾದ ವೇಗದ ಮಿತಿಯನ್ನು ಮೀರಿಸಿತ್ತು... ಆಕೆಯ ಕಾರಿನ ವೇಗವನ್ನ ನೋಡಿದ ಟ್ರಾಫಿಕ್ ಪೋಲೀಸ್ ಆಕೆಯ ಕಾರ್ ನಿಲ್ಲಿಸುವಂತೆ ದೂರದಿಂದ ಕೈಸನ್ನೆ ಮಾಡಿದ... ಆದರೆ ಆಕೆಗೆ ಗೊತ್ತಾಗುವಷ್ಟರಲ್ಲಿ ಪೋಲೀಸ್ ನನ್ನ ದಾಟಿ ಹೋಗಿದ್ದಳು... ಪೋಲೀಸ್ ಗೆ ಕೋಪ ಬಂದು ಆಕೆಯನ್ನ ಹಿಂಬಾಲಿಸತೊಡಗಿದ... ಆಕೆ ಗಾಬರಿಗೊಂಡು ಸ್ವಲ್ಪ ದೂರ ವೇಗವಾಗಿಯೇ ಕಾರು ಚಲಾಯಿಸತೊಡಗಿದಳು.. ಪೋಲೀಸ್ ಕಾರ್ ವೇಗವಾಗಿ ಸಾಗಿ ಆಕೆಯ ಕಾರನ್ನ ತಡೆದು ನಿಲ್ಲಿಸುವಲ್ಲಿ ಸಫಲವಾಯ್ತು.. ಪೋಲೀಸ್ ಕೆಳಗಿಳಿದು ಬಂದವನೇ... ಆ‌ ಮಹಿಳೆಯ ಜತೆ ಮಾತಿಗಿಳಿದ... ಪೋಲೀಸ್ : ಏನ್ರೀ ಮೇಡಮ್ ಕಾರ್ ಬಹಳ ವೇಗವಾಗಿ ಚಲಾಯಿಸ್ತಾ ಇದೀರಿ...? ಮಹಿಳೆ : ಏನ್ ಮಾಡೋದು ಸಾರ್... ಸ್ವಲ್ಪ ಅರ್ಜೆಂಟ್ ಕೆಲಸ ಇತ್ತು... ನೆರೆಮಾನೆಕೆಯೊಂದಿಗೆ ಜಗಳ ಆಗಿತ್ತು ಹಾಗಾಗಿ... ಪೋ : ಜಗಳ ಆದ್ರೆ ಇಷ್ಟು ವೇಗವಾಗಿ ಹೋಗಬೇಕಾ..? ಮ : ಹೌದು ಸಾರ್ ಜಗಳ ಸ್ವಲ್ಪ ಜಾಸ್ತಿನೇ ಆಗಿ ರಿವಾಲ್ವರ್ ತೆಗೊಂಡು ಸುಟ್ಟುಬಿಟ್ಟೆನಲ್ಲಾ... ಪೋ : ಏನು..? ಶೂಟ್ ಮಾಡಿ ಕೊಂದು ಬಿಟ್ರಾ..? ಈಗ ಓಡಿ ಹೋಗೋಕೆ ಟ್ರೈ ಮಾಡ್ತಾ ಇದೀರಾ..? ಮ : ಅಯ್ಯೋ ಓಡಿ ಹೋಗ್ತಾ ಇಲ್ಲಾ ಸಾರ್ ಡೆಡ್ ಬಾಡಿಗೆ ವ್ಯವಸ್ಥೆ ಮಾಡೋಣಾಂತ.. ಪೋ : ಡೆಡ್ ಬಾಡಿ ಎಲ್ಲಿದೆ...? ಮ : ಕಾರ್ ಡಿಕ್ಕಿಯಲ್ಲಿದೆ..? ಪೋ : ( ಗಾಬರಿಗೊಂಡು ) ಏನು ಕಾರ್ ಡಿಕ್ಕಿಯಲ್ಲಿ ಡೆಡ್ ಬಾಡಿ ಇದೆಯಾ...? ಮ : ಹೌದು ಸಾರ್... ಗನ್ ಬೇರೆ ಇದೆ.. ಅದಕ್ಕೆ ಬೇರೆ ಲೈಸೆನ್ಸ್ ಮಾಡಿಲ್ಲ ಅದನ್ನೂ ಬಿಸಾಕೋದಿತ್ತು.. ಪೋ : ಏನು.. ಲೈಸೆನ್ಸೇ ಇಲ್ಲದ ಗನ್ನಾ... ಇನ್ನು ಏನೇನು ಅಪರಾಧ ಮಾಡಿದ್ದೀರ್ರೀ... ಮ : ಮತ್ತೇನಿಲ್ಲ ಸಾರ್.. ಕಾರ್ ನೆರೆಮನೆಯಾಕೆಯದ್ದೇ.. ಕಾರ್ ಡಾಕ್ಯುಮೆಂಟ್ ಇದೆಯೋ ಇಲ್ವೋ ಗೊತ್ತಿಲ್ಲ ನನ್ನತ್ರ ಡ್ರೈವಿಂಗ್ ಲೈಸೆನ್ಸ್ ಇಲ್ಲ ಸಾರ್... ಹೀಗಿರುವಾಗ ಸ್ವಲ್ಪ ಫಾಸ್ಟಾಗೇ ಓಡಿಸಬೇಕಲ್ವಾ..?? ಪೋ : ಅಯ್ಯೋ ಅಯ್ಯೋ ನಿನ್ನನ್ನ ನಾನಲ್ಲ ನನ್ನ ಇನ್ಸ್‌ಪೆಕ್ಟರ್ರೇ ವಿಚಾರಿಸೋ ಬೇಕು... ಅಂತ ಹಿರಿಯ ಅಧಿಕಾರಿಗೆ ಕಾಲ್ ಮಾಡಿ ಎಲ್ಲವನ್ನೂ ಹೇಳಿ ಬೇಗನೇ ಬರೋಕೆ ಹೇಳಿ.. ಹಿರಿಯ ಅಧಿಕಾರಿ : ಏನ್ರೀ ಮೇಡಮ್ ನೋಡೋಕೆ ಪಾಪದ ಹೆಂಗಸಿನ ತರ ಕಾಣಿಸ್ತೀರಾ.. ಎಷ್ಟೊಂದು ಅಪರಾಧ ಮಾಡಿದ್ದೀರ್ರೀ... ಎಲ್ಲಿ ಡಿಕ್ಕಿ ಓಪನ್ ಮಾಡಿ.. ಮ : ಏನಾಯ್ತು ಸಾರ್.. ಅಂತ ಡಿಕ್ಕಿ ಓಪನ್ ಮಾಡಿದಳು.. ಹಿ.ಅ : ( ಪೋಲೀಸ್ ನ ಕರೆದು ) ಏನ್ರೀ ಡೆಡ್ ಬಾಡಿ ಅಂದ್ರಿ.. ಎಲ್ರೀ..? ಪೋ : ಸಾರ್ ಕಾರಲ್ಲಿ ಗನ್ ಇದೆ ಅಂದಿದ್ರು.. ಮ : ಅಯ್ಯೋ ಗನ್ನಾ..? ಹಿ.ಅ : ನಿಮ್ನ ಡ್ರೈವಿಂಗ್ ಲೈಸೆನ್ಸ್ ಮತ್ತು ಕಾರ್ ಡಾಕ್ಯುಮೆಂಟ್ ಕೊಡಿ ಪೋ : ಅದೆಲ್ಲಾ ಏನೂ ಇಲ್ಲ ಸಾರ್... ಮ : ತೆಕೊಳಿ ಸಾರ್ ಡ್ರೈವಿಂಗ್ ಲೈಸೆನ್ಸ್ ಮತ್ತು ಕಾರ್ ಡಾಕ್ಯುಮೆಂಟ್... ಯಾಕೋ‌ ಏನೋ ಸಾರ್ ಇವರು ನನ್ನ ಕಾರ್ ನಿಲ್ಲಿಸಿದಾಗಿಂದ ತುಂಬಾ ಅನುಮಾನ ಪಡ್ತಾ ಇದಾರೆ.. ಬಹುಶಃ ನಿಮ್ಮ ಹತ್ರ ನಾನು ಓವರ್ ಸ್ಪೀಡಲ್ಲಿ ಡ್ರೈವಿಂಗ್ ಮಾಡ್ತಾ ಇದ್ದೆ ಅಂತ ಹೇಳಿರ್ಬೇಕಲ್ಲಾ... ಹಿ.ಅ : ಹೌದು ಮೇಡಮ್ ನೀವ್ ಹೊರಡಿ ಆತನನ್ನ ನಾನು ತರಾಟೆ ತೆಗೊಳ್ತೇನೆ... ಮ : ತುಂಬಾ ಧನ್ಯವಾದ ಸಾರ್... ಆದ್ರೂ ಒಮ್ಮೆ ಕ್ಷಮಿಸಿ ಬಿಡಿ ಸಾರ್ ಅವರನ್ನ... ( ಡಾ.ಗುರುರಾಜ ಕರ್ಜಗಿಯವರ ಕರುಣಾಳು ಬಾ ಬೆಳಕೆ ಭಾಷಣ ಮಾಲಿಕೆಯಲ್ಲಿ ಕೇಳಿದ ಕತೆ )
😂 😇 7

Comments