ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
June 1, 2025 at 03:41 AM
ಅಂತರಾಳದಿಂದ ಕಳೆದ ವಾರದ ವಿಕ್ರಮ ಸಂಚಿಕೆಯಲ್ಲಿ ವೃಷಾಂಕ್ ಭಟ್ವರ ಅಂಕಣದಲ್ಲಿ ಸೊಗಸಾದ ಘಟನೆಯನ್ನ ವಿವರಿಸಿದ್ದರು.. ಕಾಲೇಜಿನಲ್ಲಿ ಒಮ್ಮೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳ ಬಳಿ.. " ನೀವು ಎಲ್ಲವನ್ನೂ ಹೇಳಿಕೊಳ್ಳುವ ವ್ಯಕ್ತಿ ಯಾರು..? ಯಾರ ಬಳಿ ನೀವು ಏನೂ ಮುಜುಗರವಿಲ್ಲದೆ ಮಾತನಾಡುತ್ತೀರಿ. ನಿಮ್ಮ ದೈನಂದಿನ ಎಲ್ಲಾ ಘಟನೆಗಳನ್ನು ಚಾಚೂ ತಪ್ಪದೆ ಹೇಳಬಹುದು ಎಂದರೆ ಯಾರಿಗೆ ಹೇಳುತ್ತೀರಿ..? " ಎಂದು ಕೇಳಿದರಂತೆ.. ಹೆಚ್ಚಿನ ವಿದ್ಯಾರ್ಥಿಗಳೆಲ್ಲರೂ ತಮ್ಮ ಆಪ್ತ ಸ್ನೇಹಿತರ ಹೆಸರನ್ನ ಹೇಳಿದರೆ ಒಬ್ಬಾಕೆ ಮಾತ್ರ ತನ್ನ ಅಮ್ಮನ ಹೆಸರನ್ನ ಹೇಳಿದಳಂತೆ.. ಆಗ ಶಿಕ್ಷಕಿ ಅನುಮಾನದ ಧ್ವನಿಯಲ್ಲೇ " ಎಲ್ಲಾ ಎಂದರೆ ಎಲ್ಲವನ್ನೂ ಹೇಳುತ್ತೀಯಾ..? " ಎಂದು ಕೇಳಿದಾಗ ನಗುವ ವಿದ್ಯಾರ್ಥಿ ವೃಂದದ ನಡುವೆ ಆಕೆ ಧೈರ್ಯದಿಂದ " ಹೌದು, ಎಲ್ಲವನ್ನೂ ಅಮ್ಮನಿಗೆ ಹೇಳುತ್ತೇನೆ. ಅಮ್ಮನಿಗೆ ಏನನ್ನ ಹೇಳಬಹುದೋ ಅದನ್ನು ಮಾತ್ರ ಮಾಡುತ್ತೇನೆ. ಅಮ್ಮನಿಗೆ ಯಾವುದನ್ನು ಹೇಳಲು ಸಾಧ್ಯವಿಲ್ಲವೋ ಅದ್ಯಾವುದನ್ನೂ ಮಾಡುವುದಿಲ್ಲ. " ಎಂದಳಂತೆ.. ಈ ಘಟನೆಯನ್ನೋದಿದಾಗ ಆ ವಿದ್ಯಾರ್ಥಿನಿಯ ಬಗೆಗೆ ಅಭಿಮಾನ ಮೂಡುವುದರಲ್ಲಿ ಸಂಶಯವೇ ಇಲ್ಲ. ಮೂರು ವಿಚಾರಗಳಿಗಾಗಿ ಆಕೆಯ ವ್ಯಕ್ತಿತ್ವ ಮನಸ್ಸಿಗೆ ಅಪ್ಯಾಯಮಾನವಾಗುತ್ತದೆ... ಮೊದಲನೆಯದಾಗಿ ಆಕೆ ಸತ್ಯವನ್ನ ನಿರ್ಭಯದಿಂದ ಹೇಳುವ ಗುಣ.. ಎಲ್ಲರೂ ಆಪ್ತರ ಹೆಸರನ್ನೇ ಹೇಳುವಾಗ ತನ್ನ ಉತ್ತರ ಬೇರೆಯದಾಗಿದ್ದರೂ ಅದನ್ನೇ ಹೇಳುವ ದೈರ್ಯ ತೋರಿದಳಲ್ಲ.. ಅಂದರೆ ತಾಯಿಯ ಹೆಸರನ್ನ ಹೇಳಿದಾಗ ಇಂತಹಾ ಪೂರಕ ಪ್ರಶ್ನೆಯೊಂದು ಬಂದೀತು ಎನ್ನುವ ಅನುಮಾನ ಇದ್ದಿರಬಹುದು.. ಆದರೆ ಆಕೆ ಅದಕ್ಕೆ ಅಂಜಿ ಸುಳ್ಳುನ್ನ ಹೇಳಲಿಲ್ಲ.. ಎರಡನೆಯದಾಗಿ ಪೂರಕ ಪ್ರಶ್ನೆಗೆ ಆಕೆ ಸಮರ್ಥವಾಗಿ ಉತ್ತರಿಸಿದಳು.. ಅಂದರೆ ಸತ್ಯವಾದ ವಿಚಾರ ಕೇವಲ ಹಾರಿಕೆಯ ಉತ್ತರವಾಗಿರಲಿಲ್ಲ ಅಂದರೆ ತಾನು ಎಲ್ಲವನ್ನೂ ತಾಯಿಯ ಜತೆ ಹಂಚಿಕೊಳ್ಳುತ್ತೇನೆ ಅನ್ನುವುದು ಉಳಿದವರ ಉತ್ತರಕ್ಕಿಂತ ವಿಭಿನ್ನವಾಗಿರಲಿ ಎಂದು ಕೊಟ್ಟ ಉತ್ತರವಲ್ಲ... ಆ ಉತ್ತರಕ್ಕೆ ಸರಿಯಾದ ಕಾರಣ ಆಕೆಯ ಬಳಿ ಇದೆ.. ಮೂರನೆಯದು... ಪೂರಕ ಪ್ರಶ್ನೆಗೆ ಕೊಟ್ಟ ಉತ್ತರ... ಹೇಳಿಕೊಳ್ಳಬಹುದಾದನ್ನೇ ಮಾಡುತ್ತೇನೆ.. ಹೇಳಲಾಗದೇ ಇರುವುದನ್ನ ಮಾಡುವುದೇ ಇಲ್ಲ.. ಈ ಸ್ಪಷ್ಟತೆ ಬಹುಶಃ ಅತಿ ದೊಡ್ಡ ಮೌಲ್ಯವೇ ಸರಿ.. ಇಂತಹಾ ಸಂಸ್ಕಾರವನ್ನ ಬೆಳಿಸಿಕೊಳ್ಳುವ ಮಕ್ಕಳನ್ನ ಪಡೆಯುವುದು ನಿಜಕ್ಕೂ ಭಾಗ್ಯವೇ ಸರಿ.. ಇಂತಹಾ ವಿದ್ಯಾರ್ಥಿಗಳು ಇತರರಿಗೆ ಆದರ್ಶವಾಗಬೇಕಲ್ವೇ..?
❤️ 1

Comments