ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
June 1, 2025 at 07:35 AM
ವಿಶ್ವಾವಸು ನಾಮ ಸಂವತ್ಸರದ ಓದು - ೬ ಕೃತಿ : ಜಲಪಾತ ಲೇಖಕರು : ಡಾ. ಎಸ್.ಎಲ್.ಭೈರಪ್ಪ ಪ್ರಕಾಶನ : ಸಾಹಿತ್ಯ ಭಂಡಾರ ಬಹುಶಃ ಭೈರಪ್ಪನವರ ಸಣ್ಣ ಕಾದಂಬರಿಗಳಲ್ಲಿ ಇದೂ ಒಂದು.. ಭೌಗೋಳಿಕ ಹಿನ್ನೆಲೆಯಲ್ಲೂ ವಿಸ್ತಾರವಿಲ್ಲ.. ಅಗ್ರಹಾರದಿಂದ ಮುಂಬಯಿ ಮತ್ತೊಂದೆರಡು ಊರುಗಳ ನಡುವಲ್ಲಿ ಓಡಾಡುವ ಕತೆ.. ಸರಳವಾಗಿ ಆರಂಭವಾಗಿ ಕತೆಯಾದರೂ ಮುಂದೆ ಪ್ರಮುಖ ಪಾತ್ರಗಳ ಜೀವನದಲ್ಲಿ ಬರುವ ಪರಿಸ್ಥಿತಿ ಆ ಪರಿಸ್ಥಿತಿಯನ್ನ ಆ ಪಾತ್ರಗಳು ಕಾಣುವ ರೀತಿ ಆ ಪಾತ್ರಗಳ ಮನೋಧರ್ಮಗಳನ್ನ ಚಿತ್ರಿಸಿರುವ ರೀತಿ ನಿಜಕ್ಕೂ ಅದ್ಭುತ.. ಜೀವಸೃಷ್ಠಿ, ರತಿಕ್ರಿಯೆ ಇವುಗಳನ್ನ ಇಲ್ಲಿ ಕೊಟ್ಟಿರುವ ದೃಷ್ಟಿಕೋನದಲ್ಲಿ ನಾನು ಯಾವತ್ತೂ ಊಹಿಸಿರಲಿಲ್ಲ. ಅದರಲ್ಲೂ ಅದೇ ವಿಚಾರ ವ್ಯಕ್ತಿ ವ್ಯಕ್ತಿಗಳ ನೋಟದಲ್ಲಿ ಹೇಗೆಲ್ಲಾ ವಿಭಿನ್ನವಾಗಿರುತ್ತದೆ ಅನ್ನುವುದನ್ನೂ ಪಾತ್ರಗಳ ಮನೋಧರ್ಮದ ಮೂಲಕ ಚಿತ್ರಿಸಿರುವ ಬಗೆ ಅದ್ಭುತ.. ಪಾತ್ರಗಳ ಜೀವನದ ಏರಿಳಿತ.. ಕಲೆ ಮತ್ತು ಸಂಗೀತದ ಬಗೆಗಿನ ವಿಚಾರಗಳನ್ನ ಚೆನ್ನಾಗಿ ಚಿತ್ರಿಸಿದ್ದಾರೆ.. ಕತೆಯ ನಾಯಕಿ ವಸುವಿನ ಪ್ರಸವ ವೇದನೆಯ ವಿವರಣೆ.. ಅಬ್ಬಾ ಇದುವರೆಗೆ ಅಂತಹಾ ವಿವರಣೆ ಮತ್ತೆಲ್ಲೂ ಓದಿಲ್ಲ.. ಕೇವಲ ಮುಂಬಯಿ ಮಾತ್ರ ಬದಲಾಗದೆ ಹಳ್ಳಿಯೂ ನಗರದಂತಾದ ಚಿತ್ರಣ ಆಹಾ..ಒಟ್ಟಿನಲ್ಲಿ ಕಲೆಯಾಗಲಿ , ಬದುಕಾಗಲಿ ಹರಿಯುವ ನದಿಯಂತೆ..ಅ ನದಿಯ ಒಂದು ಭಾಗ ಜಲಪಾತ.. ಅದನ್ನೇ ಉಪಮೆಯಾಗಿಸಿ ಈ ಹೆಸರಿಟ್ಟರೋ ಗೊತ್ತಿಲ್ಲ.. ನನ್ನ ಮತಿಗೆ ತೋಚಿದ್ದು ಹಾಗೆ.. ಅಂತೂ ಸೊಗಸಾದ ಓದು.. ಹಿಡಿಸಿದ ಸಾಲುಗಳು * ಹೊಸ ಆತಂಕ ಬಂದರೆ ಹಳೆಯ ತೊಂದರೆ ಸಹ್ಯವಾಗಿ ಕಾಣುತ್ತದೆ. * ಪೂರ್ತಿ ಅರ್ಥವಾದ ಮೇಲೆ ಮನುಷ್ಯನಿಗೆ ಒಂದು ವಸ್ತುವಿನಲ್ಲಿ ಆಕರ್ಷಣೆ ಉಳಿಯುವುದಿಲ್ಲ. * ಜೀವನವು ನಷ್ಟವಾಗುವಾಗ ಆಗುವ ಸಂಕಟಕ್ಕಿಂತ ಹೆಚ್ಚಿನ ಸಂಕಟವಿಲ್ಲ. ಮರಣ ಕಾಲದಲ್ಲಿ ಆಗುವ ಸಂಕಟ ಅದೇ. ಜೀವನವು ಸೃಷ್ಟಿಯಾಗುವ ಕ್ರಿಯೆಯಲ್ಲಿ ಲಬಿಸುವ ಸಂತೋಷಕ್ಕಿಂತ ಹೆಚ್ಚಿನ ಸಂತೋಷವಿಲ್ಲ. ರತಿಯಲ್ಲಿ ಆಗುವ ಅಮಿತ, ಅದಮ್ಯ, ಉತ್ಸಾಹಪೂರ್ಣ ಸಂತೋಷದ ಕಾರಣವು ಇದೇ. * ಜೀವನ ವಿಜೃಂಭಣೆಯೇ ಸಂತೋಷದ ಮೂಲ ಶೃತಿ.
Image from ಗುರುಪ್ರಸಾದ್ ಆಚಾರ್ಯ ಕುಂಜೂರು: ವಿಶ್ವಾವಸು ನಾಮ ಸಂವತ್ಸರದ ಓದು - ೬  ಕೃತಿ : ಜಲಪಾತ ಲೇಖಕರು : ಡಾ. ಎಸ್.ಎಲ್.ಭೈರಪ...
❤️ 👍 🙏 3

Comments