ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
June 5, 2025 at 09:15 AM
ಪ್ರವಚನಾಮೃತ... " ಅಹಂ " ಅಂದರೇನು...? ಸಂಸ್ಕೃತದ ಈ ಶಬ್ದಕ್ಕೆ ಕನ್ನಡದಲ್ಲಿ " ನಾನು " ಅನ್ನೋ ಅರ್ಥವಿದೆ.. ನಾನು ಅಂದರೆ ನಾನು ಅಷ್ಟೇ.... ಇನ್ನೂ ಆಳಕ್ಕಿಳಿಯುವ ಹಾಗಿಲ್ಲ. ಆದರೆ ಸಂಸ್ಕೃತದಲ್ಲಿ ಹಾಗಲ್ಲ. ಅದಕ್ಕೊಂದು ವಿಶೇಷವಾದ ಅರ್ಥವಿದೆ. ಅದರ ಉತ್ಪತ್ತಿಗೂ ವಿಶೇಷ ಕಾರಣಗಳಿದೆ. ಸಂಸ್ಕೃತದಲ್ಲಿ " ಹಂ " ಅಂದರೆ " ಬಿಡುವಂಥಾದ್ದು "... ಅಂತ ಈ " ಹಂ " ಶಬ್ದಕ್ಕೆ " ಅ " ಕಾರ ಸೇರಿ ಆದ ಶಬ್ದಕ್ಕೆ ಅರ್ಥ " ಯಾವುದನ್ನು ಬಿಡಲಾಗುವುದಿಲ್ಲವೋ ಅದು " ಅಂತ. ಈಗ ಯೋಚಿಸಿ ನಿಮಗೆ ಯಾವುದನ್ನಾದರೂ ಬಿಡಬಹುದು ನಿಮ್ಮನ್ನು ನಿಮಗೆ ಬಿಡಲಾಗುತ್ತದೆಯೇ...? ಖಂಡಿತ ಇಲ್ಲ ಸಂಬಂಧಗಳನ್ನ ಬಿಟ್ಟು ಬಿಡಬಹುದು, ಬಾಹ್ಯ ಬಯಕೆಗಳನ್ನ ಬಿಟ್ಟು ಬಿಡಬಹುದು... ಯಾಕೆ ದೇಹವನ್ನು ಬಿಟ್ಟರೂ ನಾನು ನಾನಾಗಿಯೇ ಉಳಿಯುತ್ತೇನೆ...ಆತ್ಮವೇ ನಾನು ತಾನೇ... ಇನ್ನೊಂದು ಅಹಂ ಅಂದರೆ ಅಹಂಕಾರ ಅದನ್ನು ಬಿಡುವುದು ಸ್ವಲ್ಪ ಕಷ್ಟವೇ ಆದರೂ ಬಿಟ್ಟು ಬಿಡಬಹುದೇನೋ ಆದರೆ ನನ್ನಿಂದ ನಾನು ಬೇರ್ಪಡುವುದಿಲ್ಲ. ನಾವು ನೀವೆಲ್ಲರೂ ಸಣ್ಣ ಅಹಂ ಆದರೆ ಭಗವಂತ ದೊಡ್ಡ ಅಹಂ, ಇಲ್ಲಿ ಒಂದು ಸೂಕ್ಷ್ಮವನ್ನ ಅರ್ಥೈಸಿಕೊಳ್ಳಬೇಕು... ನಮಗೆ ನಾನು ಮಾತ್ರ ಅಹಂ ನಿಮಗೆ ನೀವೇ ಅಹಂ ಆದರೆ ಭಗವಂತ ನಮ್ಮೆಲ್ಲರ ಪಾಲಿಗೆ ಅಹಂ.... ಅಂದರೆ ನಾವು ನಿಮ್ಮನ್ನ ಬಿಟ್ಟು ಇರಬಹುದು ಆದರೆ ಅವನನ್ನ ಬಿಟ್ಟು ಇರಲಾಗುವುದಿಲ್ಲ... ನಮಗೆಲ್ಲರಿಗೂ ಅವನನ್ನ ಬಿಟ್ಟು ಇರಲಾಗುವುದಿಲ್ಲ. ಹಾಗಾಗಿ ಅವನು ನಮ್ಮೆಲ್ಲರ ಪಾಲಿನ ಅಹಂ... ಈ ಭಾವನೆ ಗಟ್ಟಿಯಾದಷ್ಟು ಆಧ್ಯಾತ್ಮಿಕವಾಗಿ ನಾವು ಮುಂದುವರಿಯಲು ಸಾಧ್ಯ... ---ಕೆ.ಗುರುಪ್ರಸಾದ್ (ಬನ್ನಂಜೆಯವರ ಪ್ರವಚನ ಮಾಲಿಕೆಯಿಂದ)
🙏 1

Comments