ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
June 19, 2025 at 03:17 PM
ಸಿನಿಮಾ ನಾ ಕಂಡಂತೆ - ತುಡರಮ್ ತರುಣ್ ಮೂರ್ತಿ ನಿರ್ದೇಶನದ, ಮೋಹನ್ ಲಾಲ್ ಪ್ರಧಾನ ಭೂಮಿಕೆಯಲ್ಲಿರುವ ಮಲಯಾಳಮ್ ಸಿನಿಮಾ " ತುಡರಮ್ " ನಾವು ನೋಡುವ ಅನೇಕ ಸಿನಿಮಾಗಳು ಕೆಲವೊಮ್ಮೆ ಪೂರ್ತಿಯಾಗಿಯೋ ಅಥವಾ ಅಲ್ಲಿನ ಕೆಲವೊಂದು ಸನ್ನಿವೇಶಗಳೋ ನಮ್ಮ ಆಲೋಚನಾ ಕ್ರಮದ ಮೇಲೆ ಪ್ರಭಾವ ಬೀರಿಯೇ ಬೀರುತ್ತದೆ.. ಕೆಲವೊಂದು ವಿಷಯಗಳು ನಮ್ಮನ್ನ ಕಾಡುತ್ತದೆ.. ಈ ಸಿನಿಮಾ ಕೂಡಾ ಕಾಡಿದ ಸಿನಿಮಾ.. ಪ್ರಧಾನವಾಗಿ ಕಾಡಿದ್ದು... ಸಿನಿಮಾದಲ್ಲಿನ ನಾಯಕನಿಗೊದಗಿದ ಪರಿಸ್ಥಿತಿ ನಮ್ಮ ಬದುಕಿನಲ್ಲಿ ಎದುರಾದರೆ ಹೇಗಾದೀತು..? ಆ ಯೋಚನೆಯೇ ತಲೆ ಹಾಳು ಮಾಡಿಬಿಡುತ್ತದೆ.. ಕತೆ ಮತ್ತು ಚಿತ್ರಕತೆ : ಮೋಹನ್ ಲಾಲ್ ರ ದೃಶ್ಯಮ್ ಸಿನಿಮಾದ ಜಾಡಿನಲ್ಲೇ ಬರುವ ಕತೆಯನ್ನ ಇದು ಒಳಗೊಂಡಿದೆಯಾದರೂ ಚಿತ್ರಕತೆ ತುಂಬಾ ಸುಂದರವಾಗಿದೆ. ಇಂತಹಾ ಕತೆಯ ಸಾಧ್ಯತೆಯನ್ನ ಕಾಣುವಾಗಲೆಲ್ಲಾ ಮನಸ್ಸಿಗೆ ಅನಿಸೋದು ಇಷ್ಟೊಂದು ಬಗೆಯ ಇಷ್ಟೊಂದು ವಿಭಿನ್ನತೆಯ ಕತೆಗಳನ್ನೆಲ್ಲಾ ಹೇಗೆ ಹೊಸೆಯುತ್ತಾರಪ್ಪಾ ಅಂತ.. ನಿರ್ದೇಶನ : ಸಿನಿಮಾದ ನಿರ್ದೇಶನ ಸೊಗಸಾಗಿದೆ... ಸಿನಿಮಾದ ಆರಂಭದಲ್ಲಿ ಕಾಡಿನ ದೃಶ್ಯವೊಂದರಲ್ಲಿ ಬರುವ ಆನೆಯ ಬಗೆಗಿನ ವಿವರ ಜತೆಗೆ ಅಲ್ಲೊಂದು ಆನೆಯ ಪುಟ್ಟ ಸಂಸಾರ ಮಲಗಿರುವ ಚಿತ್ರಣ ಕೊಡುತ್ತಾರಲ್ಲ ಇದು ನಿರ್ದೇಶಕನ ವಿಶೇಷತೆಯನ್ನ ಎತ್ತಿ ತೋರಿಸುತ್ತದೆ.. ಇದೇ ಆನೆಯ ಕುರಿತಾದ ಸಂಭಾಷಣೆಯೂ ಕೊನೆಯಲ್ಲಿ ಖಳನಾಯಕನೂ, ಮತ್ತು ನಾಯಕನೂ ತಮ್ಮ ಮಾತಿನಲ್ಲಿ ತರುವುದು ನಿರ್ದೇಶಕರ ಐಡಿಯಾವೇ ಆಗಿರಬೇಕು..ಜತೆಗೆ ಸಿನಿಮಾದ ಪಾತ್ರಗಳಿಗೆ ಪಾತ್ರಧಾರಿಗಳನ್ನ ಆಯ್ದುಕೊಂಡ ಜಾಣ್ಮೆಯೂ ನಿರ್ದೇಶಕನ ಧನಾತ್ಮಕ ಅಂಶ. ನಟನೆ : ಮೋಹನ್ ಲಾಲ್ " ಬೆಂಜ್ " ಪಾತ್ರವನ್ನ ಜೀವಿಸಿದ್ದಾರೆ. ಆ ಪಾತ್ರವನ್ನ ತನ್ನೊಳಗೆ ಇಳಿಸಿಕೊಂಡು ನಟನೆ ಮಾಡಿದ್ದಾರೆ. ಆತನ ಮಗನ ಪಾತ್ರಧಾರಿಯೂ ಮನಸ್ಸಿಗೆ ಖುಷಿ ಕೊಟ್ಟ ಆದರೆ ಸಿನಿಮಾ ಆರಂಭದ ಹಂತದಲ್ಲಿ ನಟಿ ಶೋಭನಾ ಅವರ ನಟನೆ.. ಯಾಕೋ ಸಪ್ಪಗನಿಸಿತು... ಆ ಪಾತ್ರವನ್ನ ಆಕೆ ಜೀವಿಸಿಲ್ಲ... ನಟಿಸಿದ್ದಾರೆ ಅನ್ನುವ ಹಾಗಿತ್ತು... ಅಂದರೆ ಅಕೆ ಶೋಭನಾಳೇ ಹೊರತು " ಲಲಿತಾ " ಅಲ್ಲ ಅನ್ನುವುದು ನೋಡುಗನಿಗೆ ಸ್ಪಷ್ಟವಾಗಿ ಗೊತ್ತಾಗುವ ಹಾಗಿದೆ. ಆದರೆ ಇವಿಷ್ಟೂ ನಟನೆಗಿಂತಲೂ ನನಗೆ ಅತಿಯಾಗಿ ಖುಷಿಕೊಟ್ಟಿದ್ದು.. " ಜಾರ್ಜ್ " ಪಾತ್ರಧಾರಿ ಪ್ರಕಾಶ್ ವರ್ಮಾ ಅವರದು... ಆತನ ಆಗಮನದ ಹೊತ್ತಲ್ಲಿ ಆತ ತೋರುವ ಸಹಜ ತೋರಿಕೆ ಸೌಮ್ಯತೆ, ಮುಂದುವರಿಯುತ್ತಾ ಅನಾವರಣವಾಗುವ ಆತನ ಕೃತ್ರಿಮತೆ , ಕ್ರೌರ್ಯ ಎಲ್ಲವೂ ಮನಸ್ಸಿನಲ್ಲಿ ಆಕ್ರೋಷವನ್ನುಂಟು ಮಾಡುತ್ತದೆ ಹಾಗೂ ಬೆನ್ನಿ ಪಾತ್ರಧಾರಿಯಾದ " ಬಿನು ಪಪ್ಪು." ಅವರದ್ದೂ ಅತ್ಯುತ್ತಮ ನಟನೆ. ಅದರಲ್ಲೂ ಪ್ರಕಾಶ್ ವರ್ಮಾ.. ಮೋಹನ್ ಲಾಲರನ್ನೂ ಮೀರಿಸುವಂತೆ ನಟಿಸಿದ್ದಾರೆ. ಇದರ ಹೊರತಾಗಿ ಸಂಗೀತ ಮತ್ತು ಸಂಭಾಷಣೆ ಒಳ್ಳೆಯದಿದೆ... ಅದರಲ್ಲೂ ಸಿನಿಮಾಟೋಗ್ರಾಫಿ ಸಕ್ಕತ್ತಾಗಿದೆ ಹಚ್ಚ ಹಸಿರಿನ ದಟ್ಟ ಕಾಡಿನ ದೃಶ್ಯವನ್ನ ಸೊಗಸಾಗಿ ಸೆರೆ ಹಿಡಿದಿದ್ದಾರೆ. ಜತೆಗೆ ಹಿನ್ನಲೆ ಸಂಗೀತವೂ ನಿಮ್ಮನ್ನ ಕುತೂಹಲದ ಪ್ರಪಾತಕ್ಕೆ ದೂಡುವಂತೆ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ.. ಒಟ್ಟಿನಲ್ಲಿ ಮನಸ್ಸನ್ನ ಕಾಡುವ ಸಿನಿಮಾ... ನಮ್ಮ ಸಂಸಾರದಲ್ಲಿ ಇಂತಹಾ ಪರಿಸ್ಥಿತಿಗಳು ಬಾರದಿರಲಿ ಅಂತ ದೇವರನ್ನ ಪ್ರಾರ್ಥಿಸೋಣ ಅಷ್ಟೇ... ನೋಡಿ ಸಿನಿಮಾ ಸೊಗಸಾಗಿದೆ..
Image from ಗುರುಪ್ರಸಾದ್ ಆಚಾರ್ಯ ಕುಂಜೂರು: ಸಿನಿಮಾ ನಾ ಕಂಡಂತೆ - ತುಡರಮ್   ತರುಣ್ ಮೂರ್ತಿ ನಿರ್ದೇಶನದ, ಮೋಹನ್ ಲಾಲ್ ಪ್ರಧಾನ ...
👍 🙏 3

Comments