
Bengaluru City Police
June 21, 2025 at 03:08 PM
ಜೂನ್ 20, 2025ರಂದು ಬೆಂಗಳೂರು ನಗರ ಪೊಲೀಸ್ ಹಾಗೂ ಪರಿಹಾರ್ ಸಂಸ್ಥೆಯು ಹೆಗಡೆ ನಗರದ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಉತ್ತರ ಹಾಗೂ ಪರಿಹಾರ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. 6 ತಿಂಗಳ ಹೊಲಿಗೆ ಹಾಗೂ ಬದುಕು ಕಟ್ಟಿಕೊಳ್ಳುವ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಮಾಂಡ್ ಸೆಂಟರ್ ನ ಡಿಸಿಪಿ ಕ್ಷಮಾ ಮಿಶ್ರಾ,ಐಪಿಎಸ್, ಸಿಎಆರ್ ಉತ್ತರ ವಿಭಾಗದ ಡಿಸಿಪಿ ನಾಗರಾಜ, ಐಪಿಎಸ್ , ಪರಿಹಾರ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಣಿ ಶೆಟ್ಟಿ ಅವರು ಉಪಸ್ಥಿತರಿದ್ದರು.
ಕೌಶಲ್ಯಾಭಿವೃದ್ಧಿ ಮೂಲಕ ಮಹಿಳಾ ಸಬಲೀಕರಣ, ಪುನರ್ವಸತಿ ಹಾಗೂ ಸಮುದಾಯದ ಬೆಂಬಲದ ಕುರಿತಂತೆ ನಮ್ಮ ಬದ್ಧತೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು.
On 20th June 2025, Bengaluru City Police and Parihar organized a certificate distribution ceremony at the Parihar Skill Development Training Center, CAR North, Hegade Nagar. Women who successfully completed a 6-month tailoring and life skills course were felicitated for their achievement. The event was graced by DCP Command Centre Kshama Mishra, IPS, Nagaraja K.S.P.S., DCP CAR North, and Rani Shetty, Joint Secretary, Parihar. This initiative highlights our ongoing commitment to women's empowerment and rehabilitation through skill development and community support.
#bengalurucitypolice #bengalurupolice #police #awareness #publicsafety #antinarcotics #womensafety #bengaluruupdates #parihar
👍
3