ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 16, 2025 at 05:59 AM
16-6-2025 ಸೋಮವಾರದ ಹವಾಮಾನ ಮುನ್ಸೂಚನೆ.
ಕರಾವಳಿ ಮಲೆನಾಡು ಜೆಲ್ಲೆಗಳಲ್ಲಿ ನಿನ್ನೆ ನಿರಂತರ ಮಳೆ ಮುಂದುವರೆದಿತ್ತು. ಉಡುಪಿ ಜಿಲ್ಲೆಯ ಹೆಚ್ಚಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಒಳನಾಡು ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ಇರಲಿದ್ದು ನಿರಂತರ ಮಳೆ ಮುಂದುವರೆಯಲಿದೆ. ಎಲ್ಲಾ ಪ್ರದೇಶಗಳಲ್ಲಿಯೂ ಉತ್ತಮ ಮಳೆಯ ಮುನ್ಸೂಚನೆ ಇದೆ. ದ.ಕ ಉಡುಪಿ ಉ.ಕ. ಘಟ್ಟಪ್ರದೇಶಗಳಲ್ಲಿಯೂ ಭಾರಿ ಮಳೆಯ ಮುನ್ಸೂಚನೆ ಇದೆ. ನಾಳೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಸ್ವಲ್ಪ ಮಳೆ ಕಡಿಮೆ ಆಗಲಿದ್ದು ಆಗಾಗ ಸಾಧಾರಣ ಮಳೆ ಜೂನ್ 18 ತನಕ ಮುಂದುವರೆಯಲಿದೆ.
ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಇವತ್ತೂ ಕೊಡಗು ಚಿಕ್ಕಮಗಳೂರು ಜಿಲ್ಲೆಗಳ ಅಲ್ಲಲ್ಲಿ ಭಾರಿ ಮಳೆ ಮುಂದುವರೆಯಲಿದೆ. ಶಿವಮೊಗ್ಗ ಹಾಸನ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಲಿದ್ದು ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಭಾರಿ ಮಳೆಯಾಗಬಹುದು. ನಾಳೆಯಿಂದ ಮಳೆ ಸ್ವಲ್ಪ ಕಡಿಮೆ ಆಗಲಿದ್ದು ಸಾಧಾರಣ ಮಳೆ 2 ದಿನ ಮುಂದುವರೆಯಲಿದೆ.
ದಕ್ಷಿಣ ಒಳನಾಡಿನ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು - ಗ್ರಾಮಾಂತರ ತುಮಕೂರು ಚಿತ್ರದುರ್ಗ ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ. ಮೈಸೂರು ಚಾಮರಾಜನಗರ ರಾಮನಗರ ಮಂಡ್ಯ ಬಳ್ಳಾರಿ ಜಿಲ್ಲೆಗಳಲ್ಲಿಯೂ ಸಾಮಾನ್ಯ ಮಳೆ ಮುನ್ಸೂಚನೆ ಇದೆ.
ಉತ್ತರ ಒಳನಾಡಿನಲ್ಲಿ ಮಳೆ ಕಡಿಮೆ ಆಗಲು ಪ್ರಾರಂಭವಾಗಿದೆ. ಬೆಳಗಾವಿ ಧಾರವಾಡ ಗದಗ ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮತ್ತು ಬಿಜಾಪುರ ಬಾಗಲಕೋಟೆ ಕೊಪ್ಪಳ ರಾಯಚೂರು ಯಾದಗಿರಿ ಕಲ್ಬುರ್ಗಿ ಬೀದರ್ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದೆ.
ಅರಬ್ಬೀಸಮುದ್ರದಲ್ಲಿ ಗುಜರಾತ್ ಸಮೀಪ ಮತ್ತು ಬಂಗಾಳ ಕೊಲ್ಲಿಯ ಉತ್ತರಕ್ಕೆ ಪ. ಬಂಗಾಳ ಸಮೀಪ ಇರುವ ಸೈಕ್ಲೋನಿಕ್ ಏರ್ ಸರ್ಕ್ಯುಲೇಷನ್ ಕಾರಣಗಳಿಂದ ಪಶ್ಚಿಮ ಕರಾವಳಿಯಲ್ಲಿ ಮುಂಗಾರು ಚುರುಕಾಗಿದ್ದು ಭಾರಿ ಮಳೆಯಾಗುತ್ತಿದೆ. ಈ ಗಾಳಿಯ ತಿರುಗುವಿಕೆ ಉತ್ತರಕ್ಕೆ ಹೋದಂತೆ ದಕ್ಷಿಣದಲ್ಲಿ ಮಳೆ ಕಡಿಮೆ ಆಗಲಿದೆ. ಕರಾವಳಿ ತೀರಪ್ರದೇಶಗಳಲ್ಲಿ ಸಾಮಾನ್ಯ ಮಳೆ ಮುಂದುವರೆಯಲಿದೆ.
👍
🙏
❤️
😃
58