ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 20, 2025 at 07:59 AM
20-6-2025 ಶುಕ್ರವಾರದ ಹವಾಮಾನ ಮುನ್ಸೂಚನೆ.
ಕರಾವಳಿಯ ಜಿಲ್ಲೆಗಳಲ್ಲಿ ನಿನ್ನೆ ಹಗಲು ಆಗಾಗ ಸಣ್ಣ ಮಳೆಯಾಗಿದೆ. ಮಲೆನಾಡು ಜಿಲ್ಲೆಗಳು ಮತ್ತು ಬೆಳಗಾವಿ ಧಾರವಾಡ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಿತ್ತು.
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳಲ್ಲಿ ಹಗಲು ಬಿಸಿಲಿನ ಜೊತೆಗೆ ಆಗಾಗ ಸಾಮಾನ್ಯ ಗಾಳಿ ಮಳೆಯ ಮುನ್ಸೂಚನೆ ಇದೆ. ಕಳೆದ 2-3 ದಿನಗಳಿಂದ ರಾತ್ರಿ ಮಳೆ ಪ್ರಮಾಣ ಕಡಿಮೆ ಆಗಿ ಹಗಲು ಮಳೆ ಬರುತ್ತಿದೆ. ಮುಂಗಾರು ದುರ್ಬಲ ಆದರೂ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ (10-30mm) ಮುಂದುವರೆಯಲಿದ್ದು ಜೂನ್ 22 ರಿಂದ ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮಳೆ ಪ್ರಮಾಣ ಜಾಸ್ತಿ ಆಗುವ ಮುನ್ಸೂಚನೆ ಇರುವ ಕಾರಣ ಮುಂದಿನ ಒಂದು ವಾರ ಜೂನ್ 28 ತನಕ ಆಗಾಗ ಮಳೆ ಮುಂದುವರೆಯಬಹುದು.
ಮಲೆನಾಡು ಜಿಲ್ಲೆಗಳಲ್ಲಿಯೂ ಒಂದೆರಡು ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಮಳೆ ಪ್ರಮಾಣ ಜಾಸ್ತಿ ಇರಬಹುದು.ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಮಾನ್ಯ ಮುಂಗಾರು ಮುಂದಿನ 10 ದಿನ ಮುಂದುವರೆಯಲಿದೆ.
ದಕ್ಷಿಣ ಒಳನಾಡಿನ ಮೈಸೂರು ಮಂಡ್ಯ ಬೆಂಗಳೂರು - ಗ್ರಾಮಾಂತರ ತುಮಕೂರು ದಾವಣಗೆರೆ ಬಳ್ಳಾರಿ ಜಿಲ್ಲೆಗಳ ಕೆಲವೆಡೆ 1-10mm ನ ಸಣ್ಣ ಮಳೆಯ ಮುನ್ಸೂಚನೆ ಇದೆ. ಜೂನ್ ಕೊನೆ ತನಕವು ಈ ಭಾಗದಲ್ಲಿ ಮುಂಗಾರು ಚೇತರಿಸುವ ಸಾಧ್ಯತೆ ಕಡಿಮೆ. ಜೂನ್ ತಿಂಗಳ ಮುಂಗಾರು ಕೊರತೆ ಆಗಬಹುದು.
ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಜಿಲ್ಲೆಗಳಲ್ಲಿ 10-30mm ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು ಜಿಲ್ಲೆಗಳ ಅಲ್ಲಲ್ಲಿ 1-5mm ತುಂತುರು ಮಳೆಯ ಸಾಧ್ಯತೆ ಇದೆ.
ಮುಂಗಾರು ಉತ್ತರ ಭಾರತ ಪ್ರವೇಶಿಸಿದ್ದು ಮುಂದಿನ 10 ದಿನ ಈಶಾನ್ಯ ಭಾರತದಲ್ಲಿ ಅಧಿಕ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಭಾರತದಲ್ಲಿ ಮುಂಗಾರು ದುರ್ಬಲ ಆಗಿ ಮುಂದುವರೆದರೂ ಕರಾವಳಿ ಜಿಲ್ಲೆಗಳಲ್ಲಿ ಜೂನ್ 28 ತನಕ ಬಿಸಿಲು - ಮಳೆಯ ವಾತಾವರಣ ಮುಂದುವರೆಯಲಿದೆ.
👍
🙏
😢
39