Priyank Kharge 🇮🇳
June 13, 2025 at 05:16 AM
ಕಲಬುರಗಿ ಯುವಜನರನ್ನು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮರ್ಥರನ್ನಾಗಿಸುವುದು ನಮ್ಮ ಗುರಿ. ಕಲಬುರಗಿಯ ಯುವ ಜನತೆ ಉನ್ನತ ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸುಸಜ್ಜಿತ ಕೋಚಿಂಗ್ ಸೆಂಟರ್ ತೆರೆಯಲು ಉದ್ದೇಶಿಸಲಾಗಿದೆ.
ಕಲಬುರಗಿ ಹೊರವಲಯದಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಸುಸಜ್ಜಿತ ತರಬೇತಿ ಕೇಂದ್ರ ತಲೆ ಎತ್ತಿದೆ.
- ಈ ವರ್ಷ ಒಟ್ಟು 500 ಅಭ್ಯರ್ಥಿಗಳಿಗೆ ತರಬೇತಿ
- 400 ಕೆಎಎಸ್ ಹಾಗೂ 100 ಐಎಎಸ್ ಅಭ್ಯರ್ಥಿಗಳಿಗೆ ತರಬೇತಿ
- ಒಟ್ಟು 10 ತಿಂಗಳು ಅವಧಿಯ ತರಬೇತಿ
- ಮುಂದಿನ ವರ್ಷದಿಂದ ವಸತಿ ಸಹಿತ ತರಬೇತಿಗೆ ವ್ಯವಸ್ಥೆ
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ನೀಡುವುದರ ಜೊತೆಗೆ ಅವರಿಗೆ ಬೇಕಾಗುವ ಪುಸ್ತಕಗಳು ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಈ ಕೇಂದ್ರ ಹೊಂದಿರುತ್ತದೆ.
#ಕಲಬುರಗಿಕಲ್ಯಾಣ

🙏
❤️
👍
17