Priyank Kharge 🇮🇳
June 13, 2025 at 10:39 AM
ಜಾಗತಿಕ ಸ್ಟಾರ್ಟ್ಅಪ್ ಇಕೋ ಸಿಸ್ಟಂ ವರದಿ (GSER) 2025 ರಲ್ಲಿ ಬೆಂಗಳೂರು 7 ಸ್ಥಾನಗಳ ಏರಿಕೆ ಕಂಡು #14ನೇ ಸ್ಥಾನಕ್ಕೆ ತಲುಪಿದೆ. ಕಳೆದ ವರ್ಷ ಇದು 21ನೇ ಸ್ಥಾನದಲ್ಲಿತ್ತು. ಸ್ಟಾರ್ಟ್ಅಪ್ ಜೀನೋಮ್‌ನ GSER ಒಂದು ಪ್ರತಿಷ್ಠಿತ ಜಾಗತಿಕ ಮಾನದಂಡವಾಗಿದ್ದು, ಇದು ಹಣಕಾಸು, ಮಾರುಕಟ್ಟೆಯ ವ್ಯಾಪ್ತಿ, ಪ್ರತಿಭಾ ಶಕ್ತಿ, ಜ್ಞಾನದ ಹರಿವು, ಹೂಡಿಕೆ ನಿರ್ಧಾರಗಳಿಗೆ ಮಾರ್ಗದರ್ಶನ ಮತ್ತು ವಿಶ್ವಾದ್ಯಂತ ತಾಂತ್ರಿಕ ತಂತ್ರಗಳನ್ನು ರೂಪಿಸುವ ಕುರಿತಂತೆ ಇಕೋ ಸಿಸ್ಟಂಗಳನ್ನು ಮೌಲ್ಯಮಾಪನ ಮಾಡುತ್ತದೆ.
ಉನ್ನತ ಮಟ್ಟದ ಸ್ಟಾರ್ಟ್ಅಪ್ ಇಕೋ ಸಿಸ್ಟಂಗಳಲ್ಲಿ ಒಂದಾಗಿ ಕ್ಷಿಪ್ರಗತಿಯಲ್ಲಿ ಬೆಂಗಳೂರು ಬೆಳೆದ ಪರಿಯು, ನಮ್ಮ ಸಾಮರ್ಥ್ಯವು ಹೇಗೆ ನಿಜವಾದ ಫಲಿತಾಂಶಗಳಾಗಿ ಪರಿವರ್ತನೆಗೊಂಡಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು AI ಭೂದೃಶ್ಯ, ಸ್ಥಿರವಾದ ವಲಯ ಬೆಳವಣಿಗೆ, ಪ್ರಗತಿಪರ ನೀತಿ ಬೆಂಬಲ ಮತ್ತು ಅಸಾಧಾರಣ ಪ್ರತಿಭೆಗಳ ಸಂಗಮವು ನಮ್ಮನ್ನು ಮಹತ್ವದ ಜಾಗತಿಕ ಸ್ಪರ್ಧಿಯನ್ನಾಗಿ ನಿಲ್ಲಿಸಿದೆ.
ಇದು ಬೆಂಗಳೂರಿನ ಇಕೋ ಸಿಸ್ಟಂ ಅನ್ನು ಇಂದಿನ ಗುಣಮಟ್ಟದ ಸ್ಥಿತಿಗೆ ತರುವಲ್ಲಿ ಪಾತ್ರವಹಿಸಿದ ಎಲ್ಲ ನಾವೀನ್ಯಕಾರರು, ಹೂಡಿಕೆದಾರರು ಮತ್ತು ಕ್ರಿಯಾಶೀಲಗೊಳಿಸುವವರಿಗೆ ದೊರೆತ ಸಾಮೂಹಿಕ ಗೆಲುವು.

🙏
👍
❤️
12