Priyank Kharge 🇮🇳
June 14, 2025 at 07:27 AM
ಗಾರ್ಡನ್ ಸಿಟಿ, ಗ್ರೀನ್ ಸಿಟಿ, ಸಿಲಿಕಾನ್ ಸಿಟಿ ಎಂಬ ವಿಶೇಷಣಗಳನ್ನು ಪಡೆದುಕೊಂಡಿದ್ದ ಬೆಂಗಳೂರು ಈಗ “ಸ್ಟಾರ್ಟ್ ಅಪ್ ಸಿಟಿ“ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಉದ್ಯಮಶೀಲತೆಯ ಪೂರಕ ವಾತಾವರಣವಿರುವ ಜಗತ್ತಿನ ಟಾಪ್ 20 ನಗರಗಳ ಪಟ್ಟಿಯಲ್ಲಿ ಬೆಂಗಳೂರು 14ನೇ ಸ್ಥಾನಕ್ಕೆ ಏರಿದೆ. ವಿಶೇಷವೆಂದರೆ, ಭಾರತದ ಇನ್ಯಾವ ನಗರವೂ ಟಾಪ್ 20ರ ಪಟ್ಟಿಯಲ್ಲಿ ಇರದೆ, ಬೆಂಗಳೂರು ಮಾತ್ರ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕ ಮತ್ತು ಬೆಂಗಳೂರು ಈಗ ಜಾಗತಿಕ ಮಟ್ಟದಲ್ಲಿ ಭವ್ಯವಾದ ಹೆಜ್ಜೆಗುರುತುಗಳನ್ನು ಮೂಡಿಸಿದ್ದು ಹೆಮ್ಮೆಯ ಸಂಗತಿ. ಮತ್ತು ನಮ್ಮ ಸರ್ಕಾರದ ಶ್ರಮಕ್ಕೆ ಸಂದ ಶ್ರೇಯ.
ರಾಜ್ಯದ ಆರ್ಥಿಕತೆಗೆ ಚೈತನ್ಯ ನೀಡುವ ಹಾಗೂ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಕೈಗೊಂಡ ಹಲವು ಕ್ರಮಗಳಿಂದಾಗಿ ಬೆಂಗಳೂರು ಜಾಗತಿಕವಾಗಿ ಉತ್ತಮ ಸ್ಟಾರ್ಟ್ ಅಪ್ ಇಕೋ ಸಿಸ್ಟಂ ನಗರವಾಗಿ ಹೊರಹೊಮ್ಮಿದೆ.
ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ.
ಪಂಚಾಯತ್ ರಾಜ್ ವಿಕೇಂದ್ರೀಕರಣದಲ್ಲಿ ಕರ್ನಾಟಕವು ದೇಶದಲ್ಲಿ ಅಗ್ರ ಸ್ಥಾನದಲ್ಲಿರುವ ರಾಜ್ಯ.
ಬೆಂಗಳೂರು ಜಗತ್ತಿನ 14ನೇ ಸ್ಟಾರ್ಟ್ ಅಪ್ ನಗರ.
ನಮ್ಮ ಸರ್ಕಾರದ ಯಶಸ್ಸಿನೆಡೆಗಿನ ಈ ಪಯಣ ಮುಂದುವರೆಯುತ್ತಲೇ ಇರುತ್ತದೆ..
ಇನ್ನಷ್ಟು ಪ್ರಥಮಗಳನ್ನು ಸಾಧಿಸುತ್ತಲೇ ಇರುತ್ತೇವೆ.
ಕರ್ನಾಟಕವನ್ನು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಗೆ ತರುವುದು ಮತ್ತು ಬೆಂಗಳೂರನ್ನು ಜಾಗತಿಕ ಹೆಗ್ಗುರುತನ್ನಾಗಿ ಮಾಡುವುದು ನಮ್ಮ ಗುರಿ.
ಈ ಗುರಿ ಸಾಧಿಸುವ ಬದ್ಧತೆ, ಶಿಸ್ತು ಮತ್ತು ಇಚ್ಚಾಶಕ್ತಿ ನಮ್ಮ ಸರ್ಕಾರಕ್ಕಿದೆ.

❤️
👍
🙏
16