Priyank Kharge 🇮🇳

17.4K subscribers

Verified Channel
Priyank Kharge 🇮🇳
June 16, 2025 at 06:25 AM
ಕರ್ನಾಟಕದ ನಾಯಕತ್ವದ ಮತ್ತೊಂದು ಬಲವಾದ ದೃಢೀಕರಣವಾಗಿ, ಯುವರ್‌ಸ್ಟೋರಿ ಮತ್ತು ಎಕ್ಸ್‌ಫೆನೊದ 'ಕರ್ನಾಟಕ ಜಿಸಿಸಿಗಳು: ದಿ ಸ್ಪೆಷಲಿಸ್ಟ್ ಟ್ಯಾಲೆಂಟ್ ಅಡ್ವಾಂಟೇಜ್' ವರದಿಯು, ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರದ ಸ್ಥಾನದಲ್ಲಿ ರಾಜ್ಯವು ಏಕೆ ಮುಂಚೂಣಿಯಲ್ಲಿದೆ ಎಂಬುದನ್ನು ಆಳವಾಗಿ ವಿವರಿಸಿದೆ. 890 ಕ್ಕೂ ಹೆಚ್ಚು ಜಿಸಿಸಿಗಳು ಮತ್ತು 7.5 ಲಕ್ಷ ವೃತ್ತಿಪರರೊಂದಿಗೆ, ರಾಜ್ಯವು ದೇಶದ ಅನುಭವಿ ಜಿಸಿಸಿ ಪ್ರತಿಭೆಗಳಲ್ಲಿ ಸುಮಾರು 35% ರಷ್ಟು ಜನರಿಗೆ ನೆಲೆ ನೀಡಿದೆ. ಸರ್ಕಾರಿ ಯೋಜನೆಗಳು ಮತ್ತು ಉದ್ಯಮ-ಶೈಕ್ಷಣಿಕ ಸಹಯೋಗದ ಮೂಲಕ ಕೌಶಲ್ಯ ಹಾಗೂ ಆವಿಷ್ಕಾರದ ಮೇಲೆ ಸ್ಥಿರವಾದ ಗಮನ ಹರಿಸಿದೆ. ಹಿರಿಯ ನಾಯಕತ್ವದ ಹೊಣೆಗಾರಿಕೆಗಳಲ್ಲಿ ಹಾಗೂ ಯಶಸ್ಸಿನ ಹಾದಿಯಲ್ಲಿರುವ ಪ್ರತಿಭೆಗಳ ಸಂಗಮವಿರುವ ಕರ್ನಾಟಕದ 4,100 ವೃತ್ತಿಪರರ ಸಶಕ್ತ ನೆಲೆಯನ್ನು ವರದಿಯು ಪ್ರಮುಖವಾಗಿ ಉಲ್ಲೇಖಿಸಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ತುಮಕೂರಿನಂತಹ ಶ್ರೇಣಿ 2 ನಗರಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಕಂಡಾಗ ನಮ್ಮಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚುತ್ತಿದೆ. ಇದು ಜಿಸಿಸಿ ಬೆಳವಣಿಗೆಯು ಹೆಚ್ಚು ವಿಕೇಂದ್ರೀಕೃತ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸ್ಪಷ್ಟ ಸಂಕೇತವಾಗಿದೆ. ವ್ಯಾಪಾರ ಸ್ನೇಹಿ ನೀತಿಗಳು, ಪ್ರಬಲ ಇಕೋ ಸಿಸ್ಟಂ ಮತ್ತು ತಮ್ಮ ಉದ್ಯಮದ ಅಭಿವೃದ್ಧಿಗಾಗಿ ಕರ್ನಾಟಕವನ್ನು ಆಯ್ಕೆ ಮಾಡುವ ಜಾಗತಿಕ ಉದ್ಯಮಗಳಲ್ಲಿನ ದೃಢ ನಂಬಿಕೆಯ ಮೇಲೆ ಈ ನಾಯಕತ್ವವನ್ನು ನಿರ್ಮಿಸಲಾಗಿದೆ.
Image from Priyank Kharge 🇮🇳: ಕರ್ನಾಟಕದ ನಾಯಕತ್ವದ ಮತ್ತೊಂದು ಬಲವಾದ ದೃಢೀಕರಣವಾಗಿ, ಯುವರ್‌ಸ್ಟೋರಿ ಮತ್ತು ಎಕ್ಸ್...
🙏 ❤️ 19

Comments