Priyank Kharge 🇮🇳

17.4K subscribers

Verified Channel
Priyank Kharge 🇮🇳
June 17, 2025 at 06:28 AM
#parisairshow ನಲ್ಲಿ ಭಾರತ ಮತ್ತು ವಿಶೇಷವಾಗಿ ಕರ್ನಾಟಕದ ಕುರಿತಾದ ಶಕ್ತಿಯು ಮಿಂಚಿನಂತೆ ಆವರಿಸಿದೆ. ಜಾಗತಿಕ ಪಾಲುದಾರರು ನಮ್ಮ ಏರೋಸ್ಪೇಸ್ ಮತ್ತು ರಕ್ಷಣಾ ಇಕೋ ಸಿಸ್ಟಂ ಸಾಮರ್ಥ್ಯವನ್ನು ಗುರುತಿಸಿರುವುದು ನಮ್ಮಲ್ಲಿ ಮತ್ತಷ್ಟು ಉತ್ತೇಜನ ಮೂಡಿಸಿದೆ. ಸಮಗ್ರ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಅಭ್ಯಾಸಗಳಿಗೆ ಪೂರಕವಾಗಿರುವ ತಂತ್ರಜ್ಞಾನದ ನಾವೀನ್ಯತೆಗಳು ಮತ್ತು ಸುಸ್ಥಿರತೆಯನ್ನು ಒಳಗೊಂಡಂತೆ ಇಲ್ಲಿಂದ ನಾವು ಕಲಿಯುವಂತಹ ವಿಚಾರಗಳು ಬಹಳಷ್ಟಿದೆ. ವಿಮಾನಯಾನ, ಏರೋಸ್ಪೇಸ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಕರ್ನಾಟಕದ ನಾಯಕತ್ವವನ್ನು ನಾವು ಬಲಪಡಿಸುವಾಗ ಹಾಗೂ ಜಾಗತಿಕ ಬೇಡಿಕೆಯನ್ನು ಪೂರೈಸಲು ನಮ್ಮ ಇಕೋ ಸಿಸ್ಟಂ ಅನ್ನು ವೃದ್ಧಿಸುವಾಗ ಈ ಒಳನೋಟಗಳು ಅತ್ಯಗತ್ಯವಾಗಿರುತ್ತದೆ. ಮುಂದಿನ ಹಂತವೆಂದರೆ, ಈ ಉತ್ಸಾಹವನ್ನು ಕಾರ್ಯಸಾಧ್ಯ ತಂತ್ರಗಳನ್ನಾಗಿ ಪರಿವರ್ತಿಸುವುದು. ಇದು ಕರ್ನಾಟಕವನ್ನು ಮುಂದುವರಿದ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಭವಿಷ್ಯದ ಸಿದ್ಧ ಪ್ರತಿಭೆಗಳಿಗೆ ಪ್ರಮುಖ ತಾಣವನ್ನಾಗಿ ಬೆಳೆಸುತ್ತದೆ.
Image from Priyank Kharge 🇮🇳: <a class="text-blue-500 hover:underline cursor-pointer" href="/hashtag...
❤️ 🙏 👍 😂 16

Comments