Priyank Kharge 🇮🇳
June 19, 2025 at 01:37 PM
ನಮ್ಮ ಕರ್ನಾಟಕ ರಾಜ್ಯವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ವಿಶಿಷ್ಟ ಛಾಪು ಮೂಡಿಸಿದೆ. ನಾವು ಭಾರತ ಮಾತ್ರವಲ್ಲದೆ, ಏಷ್ಯಾ ಹಾಗೂ ಜಗತ್ತಿನ ಇತರೆ ಭಾಗಗಳ ಆರ್ಥಿಕ ಎಂಜಿನ್ ಆಗಿ ಬೆಳೆಯುತ್ತಿದ್ದೇವೆ.
ದೇಶದಲ್ಲಿಯೇ ಅತ್ಯಧಿಕ ಕುಶಲ ಪ್ರತಿಭೆಗಳು, ವಿದ್ಯುನ್ಮಾನ-ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ನಾಗಾಲೋಟದಲ್ಲಿದ್ದೇವೆ, ದೇಶದ ಶೇ 30ರಷ್ಟು ನವೋದ್ಯಮ ನಮ್ಮ ರಾಜ್ಯದಲ್ಲಿವೆ, ವಿದೇಶಿ ನೇರ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಇಡೀ ವಿಶ್ವದಲ್ಲಿ ನವೋದ್ಯಮಗಳಿಗೆ ಸೂಕ್ತ ವಾತಾವರಣ ಕಲ್ಪಿಸುವುದರಲ್ಲಿ ನಾವು 14ನೇ ಸ್ಥಾನದಲ್ಲಿದ್ದೇವೆ! ಗ್ಲೋಬಲ್ ಟೆಕ್ ಹಬ್‌ಗಳಲ್ಲಿ 12ನೇ ಸ್ಥಾನದಲ್ಲಿದ್ದೇವೆ. ನಾವು ಜಗತ್ತಿನ ನಾಲ್ಕನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಎನಿಸಿಕೊಂಡಿದ್ದೇವೆ.
ನಾವು ದೇಶದ ಜಿಡಿಪಿಯಲ್ಲಿ ಶೇ 8.7ರಷ್ಟು ಕೊಡುಗೆ ನೀಡುತ್ತಿದ್ದೇವೆ. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ ಶೇ 42ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ. ಇನ್ನೂ ಹೆಚ್ಚಿನ ಬಂಡವಾಳವನ್ನು ರಾಜ್ಯಕ್ಕೆ ತರುವ, ನಮ್ಮ ಪ್ರತಿಭೆಗಳಿಗೆ ಸೂಕ್ತ ಉದ್ಯೋಗ ಸೃಷ್ಟಿಸುವ ಹಾಗೂ ಬೆಂಗಳೂರಿನ ಆಚೆಗೆ ಉದ್ಯಮಗಳನ್ನು ಬೆಳೆಸುವ ಗುರಿಯನ್ನು ಸಾಧ್ಯವಾಗಿಸುವತ್ತ ದಿಟ್ಟ ಹೆಜ್ಜೆ ಇರಿಸಿದ್ದೇವೆ.
👍
🙏
❤️
8