Priyank Kharge 🇮🇳

17.4K subscribers

Verified Channel
Priyank Kharge 🇮🇳
June 20, 2025 at 05:35 AM
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನನ್ನ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಿದ್ದು ಏಕೆ ಎಂಬ ಕುತೂಹಲ ನನಗೂ ಇದೆ. ಕಳೆದ ಬಾರಿ ಅಮೆರಿಕಕ್ಕೆ ತೆರಳಿದ್ದಾಗ ಹತ್ತು ದಿನಗಳಲ್ಲಿ 72 ಸಭೆಗಳಲ್ಲಿ ಭಾಗವಹಿಸಿದ್ದೆವು. ಈ ಮಾತುಕತೆಗಳಿಂದ ಸುಮಾರು ₹30 ಸಾವಿರ ಕೋಟಿ ಬಂಡವಾಳದ ಭರವಸೆ ದೊರಕಿದೆ. ಕಳೆದ ಒಂದು ವರ್ಷದ ಒಳಗೆ ವಿದ್ಯುನ್ಮಾನ ಉತ್ಪಾದನೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರಾಜ್ಯಕ್ಕೆ ಬಂದಿರುವುದು ₹21,842 ಕೋಟಿ. ಇದರಿಂದ 18-20 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಈ ಸಾಧನೆ ಬೇರೆ ಯಾವ ರಾಜ್ಯದಿಂದಲೂ ಸಾಧ್ಯವಾಗಿಲ್ಲ. ನಾವು ಮುಂಚೆಯೇ ಅಮೆರಿಕ ಪ್ರವಾಸದ ಸಂಪೂರ್ಣ ಯೋಜನೆ ರೂಪಿಸಿದ್ದೆವು. ಅಲ್ಲಿನ ಪ್ರತಿ ಸಭೆ, ಕಾರ್ಯಕ್ರಮಗಳು, ನಿಯೋಗದ ಸಮಗ್ರ ಮಾಹಿತಿಯನ್ನು ಮೇ 15ರಂದೇ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಸಲ್ಲಿಸಿದ್ದೆವು. ಆದರೆ ಜೂನ್ 4ರಂದು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಸಕಾರಣಗಳಿದ್ದರೆ ಈ ತಿರಸ್ಕಾರವನ್ನು ಖಂಡಿತಾ ಒಪ್ಪುತ್ತೇವೆ. ಆದರೆ ಕೇಂದ್ರ ಸರ್ಕಾರ ಯಾವ ಕಾರಣವನ್ನೂ ನೀಡಿಲ್ಲ. ಜೂನ್ 6ರಂದು ನನ್ನ ಹೆಸರನ್ನು ತೆಗೆದು, ನಿಯೋಗದಲ್ಲಿ ಭಾಗವಹಿಸುವ ಅಧಿಕಾರಿಗಳ ಹೆಸರನ್ನು ಮಾತ್ರ ಕಳುಹಿಸಿದ್ದೆ. ಅರ್ಜಿಯಲ್ಲಿ ಬೇರೆ ಯಾವ ಬದಲಾವಣೆಯನ್ನೂ ಮಾಡಿರಲಿಲ್ಲ. ಜೂನ್ 11ರಂದು ಅದಕ್ಕೆ ಅನುಮೋದನೆ ದೊರಕಿತು. ನಿಯೋಗದಲ್ಲಿ ನಿರ್ಧಾರ ತೆಗೆದುಕೊಳ್ಳುವ ನಾಯಕರೂ ಇರುವುದು ಅಗತ್ಯ ಎಂಬ ಕಾರಣಕ್ಕೆ ಜೂನ್ 12ರಂದು ಶ್ರೀ ಶರತ್ ಬಚ್ಚೇಗೌಡ ಅವರ ಹೆಸರನ್ನು ಕಳುಹಿಸಿದ್ದೆ. ಜೂನ್ 14ಕ್ಕೆ ಅದಕ್ಕೆ ಅನುಮತಿ ದೊರಕಿತ್ತು. ಕೇಂದ್ರದ ಈ ನಡೆ ಪ್ರಶ್ನಾರ್ಹವಾಗಿದೆ.
❤️ 👍 🙏 😮 8

Comments