Priyank Kharge 🇮🇳
June 20, 2025 at 06:32 AM
ರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧೆ (NBEC) 2025ರಲ್ಲಿ 482 ಅರ್ಜಿಗಳೊಂದಿಗೆ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ. ಇದು ಭಾರತದಾದ್ಯಂತ ಜೈವಿಕ ಉದ್ಯಮಿಗಳು ಮತ್ತು ನಾವೀನ್ಯಕಾರರಿಗೆ ಜಗತ್ತಿನ ನೈಜ ಸಮಸ್ಯೆಗಳನ್ನು ಪರಿಹರಿಸುವ ಆಳವಾದ ವಿಜ್ಞಾನ-ಚಾಲಿತ ವಿಚಾರಗಳನ್ನು ಪ್ರದರ್ಶಿಸಲು ಕರ್ನಾಟಕ ಸರ್ಕಾರವು ನಡೆಸುವ ಪ್ರಮುಖ ವೇದಿಕೆಯಾಗಿದೆ. ಈ ವರ್ಷ, NBECಯಲ್ಲಿ 34 ರಾಜ್ಯಗಳು ಮತ್ತು UTಗಳಿಂದ 3100ಕ್ಕೂ ಹೆಚ್ಚು ಅರ್ಜಿದಾರರು ಭಾಗವಹಿಸಿದ್ದು, 2400+ ಬಿಜಿನೆಸ್ ಯೋಜನೆಗಳನ್ನು ಹಂಚಿಕೊಳ್ಳಲಾಗಿತ್ತು.
₹20 ಕೋಟಿಗೂ ಹೆಚ್ಚಿನ ಬಹುಮಾನಗಳೊಂದಿಗೆ, ನಗದು ಅನುದಾನಗಳು, ಹೂಡಿಕೆ ಅವಕಾಶಗಳು ಮತ್ತು ಉನ್ನತ ಉದ್ಯಮ ನಾಯಕರಿಂದ ಮಾರ್ಗದರ್ಶನ ಸೇರಿದಂತೆ, ನಮ್ಮ ಸ್ಟಾರ್ಟ್‌ಅಪ್‌ಗಳು ಹಾಗೂ ವಿದ್ಯಾರ್ಥಿ ತಂಡಗಳು ತಮ್ಮ ಆವಿಷ್ಕಾರಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪೈಪೋಟಿ ನಡೆಸುತ್ತಿವೆ.
ಈ ಆಲೋಚನೆಗಳು ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR), ಕೃಷಿಯಲ್ಲಿ AI ಮತ್ತು ML, ಡಿಜಿಟಲ್ ಆರೋಗ್ಯ, ಶುದ್ಧ ಇಂಧನ, ಸುಸ್ಥಿರತೆ ಮತ್ತು ಇನ್ನೂ ಅನೇಕ ನಿರ್ಣಾಯಕ ಕ್ಷೇತ್ರಗಳಲ್ಲಿ ಶಾಶ್ವತ ಪರಿಣಾಮವನ್ನು ಬೀರುತ್ತವೆ.
ಈ ರೀತಿಯ ವೇದಿಕೆಗಳನ್ನು ನಿರ್ಮಿಸಿದ್ದಕ್ಕಾಗಿ ಮತ್ತು ದೇಶಾದ್ಯಂತ ಬದಲಾವಣೆಯ ರೂವಾರಿಗಳಿಗೆ ಅವುಗಳು ಲಭಿಸುವಂತೆ ಮಾಡಿದ್ದಕ್ಕಾಗಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಸಿ-ಕ್ಯಾಂಪ್ ಇಂಡಿಯಾ ಸ್ಟಾರ್ಟ್‌ಅಪ್ ಕರ್ನಾಟಕ ಘಟಕಗಳಿಗೆ ಧನ್ಯವಾದಗಳು.

🙏
👍
❤️
9