Priyank Kharge 🇮🇳

17.4K subscribers

Verified Channel
Priyank Kharge 🇮🇳
June 20, 2025 at 08:48 AM
ಎಳನೀರು ಚಿಪ್ಪಿನಿಂದ ಕೊಕೊಪೀಟ್ ತಯಾರಿಕೆ, ರಾಜ್ಯದ ಗಮನ ಸೆಳೆದ ನಮ್ಮ ಚಿತ್ತಾಪುರ. ಎಳನೀರಿನ ಚಿಪ್ಪಿನ ವಿಲೇವಾರಿ ನಗರಗಳಲ್ಲಿ ದೊಡ್ಡ ಸವಾಲಾಗಿದೆ. ಬಹುತೇಕ ಕಡೆಗಳಲ್ಲಿ ಇದನ್ನು ಅವೈಜ್ಞಾನಿಕವಾಗಿ ದಹಿಸಲಾಗುತ್ತಿದೆ. ಆದರೆ ಯಾವ ತ್ಯಾಜ್ಯವೂ ವ್ಯರ್ಥವಲ್ಲ, ನಮ್ಮ ಬುದ್ಧಿಶಕ್ತಿ ಹಾಗೂ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕಸದಿಂದ ರಸ ತೆಗೆಯಬಹುದು ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಚಿತ್ತಾಪುರ ಪುರಸಭೆಯು ಎಳನೀರಿನ ಚಿಪ್ಪುಗಳನ್ನು ಕೂಡ ಲಾಭದಾಯಕವನ್ನಾಗಿಸುವ ಮಾರ್ಗ ಕಂಡುಕೊಂಡಿದೆ. ಎಳನೀರು ಚಿಪ್ಪಿನ ತ್ಯಾಜ್ಯದಿಂದ ಪೋಷಕಾಂಶಯುಕ್ತ ಗೊಬ್ಬರವಾದ ಕೊಕೊಪೀಟ್ ತಯಾರಿಸುವ ಮೂಲಕ 'ವೇಸ್ಟ್ ಇಸ್ ವೆಲ್ತ್' ಎನ್ನುವುದನ್ನು ತೋರಿಸಿಕೊಟ್ಟಿದೆ. ಎಳನೀರು ತ್ಯಾಜ್ಯದಿಂದ ಕೊಕೊಪೀಟ್ ಪೌಡರ್ ಮತ್ತು ಕಾಂಪೋಸ್ಟ್ ಬ್ರಿಕ್ಸ್ ತಯಾರಿಸುತ್ತಿರುವ ಪುರಸಭೆ, ಅದನ್ನು ತನ್ನ ನಿರ್ವಹಣೆಯ ಉದ್ಯಾನವನಗಳಿಗೆ ಗೊಬ್ಬರವಾಗಿ ಬಳಕೆ ಮಾಡುತ್ತಿದೆ. ಅಲ್ಲದೆ, ಹೆಚ್ಚುವರಿ ಗೊಬ್ಬರವನ್ನು ವಿವಿಧೆಡೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಆದಾಯವನ್ನು ಸಹ ಗಳಿಸುತ್ತಿದೆ. ತ್ಯಾಜ್ಯ ನಿರ್ವಹಣೆಯ ಸಮಸ್ಯೆಯಿಂದ ಮುಕ್ತಿ ಪಡೆಯುವುದರ ಜೊತೆಗೆ ಲಾಭವನ್ನೂ ಕಂಡುಕೊಂಡಿರುವುದು ಪ್ರಶಂಸನೀಯ. ಚಿತ್ತಾಪುರ ಪಟ್ಟಣದ ಬೀದಿಬದಿಯಲ್ಲಿ ಎಳನೀರು ಮಾರಾಟ ಮಾಡುವ ವರ್ತಕರೊಂದಿಗೆ ಸಭೆ ನಡೆಸಿ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಶೇಖರಣೆ ಮಾಡುವಂತೆ ಸೂಚಿಸಲಾಗಿತ್ತು. ಹೀಗೆ ಸಂಗ್ರಹವಾದ ಎಳನೀರು ಚಿಪ್ಪುಗಳನ್ನು ಪೌರ ಕಾರ್ಮಿಕರು ಪ್ರತಿನಿತ್ಯ ತೆಗೆದುಕೊಂಡು ಹೋಗಿ ಒಣಗಿಸಿ ಕೊಕೊಪೀಟ್ ತಯಾರಿಕೆಗೆ ಸಹಕರಿಸುತ್ತಿದ್ದಾರೆ. ಈ ಕೊಕೊಪೀಟ್ ಅತ್ಯಂತ ಉತ್ಕೃಷ್ಟವಾದ ನೈಸರ್ಗಿಕ ಗೊಬ್ಬರವೆಂದು ಕೃಷಿ ವಿಜ್ಞಾನ ಕೇಂದ್ರ ಪ್ರಮಾಣೀಕರಣ ಮಾಡಿದೆ. ಪುರಸಭೆಯ ಮಾದರಿ ಕಾರ್ಯಕ್ಕೆ ದೊರೆತಿರುವ ರಾಜ್ಯ ಸರ್ಕಾರದ ಪ್ರಶಸ್ತಿ ಗೌರವ ಮತ್ತಷ್ಟು ಉತ್ತೇಜನ ನೀಡಿದೆ. ಇದೆಲ್ಲವೂ ಸಾಧ್ಯವಾಗುವುದು ಜನರು ಬೆಂಬಲ, ಪ್ರೋತ್ಸಾಹ ನೀಡಿದಾಗ ಮಾತ್ರ. ಇಂತಹ ವಿನೂತನ ಜನಹಿತಕಾರಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತರುವುದಕ್ಕೆ ಸದಾ ಶ್ರಮಿಸುತ್ತದೆ.
Image from Priyank Kharge 🇮🇳: ಎಳನೀರು ಚಿಪ್ಪಿನಿಂದ ಕೊಕೊಪೀಟ್ ತಯಾರಿಕೆ, ರಾಜ್ಯದ ಗಮನ ಸೆಳೆದ ನಮ್ಮ ಚಿತ್ತಾಪುರ.  ...
❤️ 🙏 👍 😂 17

Comments