
Siddaramaiah
108.7K subscribers
Verified ChannelAbout Siddaramaiah
Official WhatsApp Channel of Shri Siddaramaiah, Chief Minister of Karnataka
Similar Channels
Swipe to see more
Posts

ಮಾದರಿ ಮೈಸೂರು ಸಂಸ್ಥಾನದ ನಿರ್ಮಾಣಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅನುಸರಿಸಿದ ಶೈಕ್ಷಣಿಕ, ಆರ್ಥಿಕ, ಪ್ರಜಾಸತ್ತಾತ್ಮಕ, ಸಾಮಾಜಿಕ ನ್ಯಾಯದ ಅಭಿವೃದ್ಧಿಯ ಹಾದಿ ಪ್ರತಿಯೊಬ್ಬ ಜನಪ್ರತಿನಿಧಿಗೆ ಆದರ್ಶಪ್ರಾಯವಾದುದ್ದು. ಬದಲಾವಣೆಯ ಹರಿಕಾರರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಜಯಂತಿಯನ್ನು ಅವರ ಸಾಧನೆಗಳ ಸ್ಮರಣೆಯೊಂದಿಗೆ ಆಚರಿಸೋಣ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮೇಲೆ ಭರವಸೆಯನ್ನಿಟ್ಟು ಮತನೀಡಿ ಹರಸಿದ ಏಳು ಕೋಟಿ ಕನ್ನಡಿಗರ ನಂಬಿಕೆ - ವಿಶ್ವಾಸವನ್ನು ಉಳಿಸಿಕೊಂಡು, ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿ ಕಾರ್ಯವನ್ನು ಜಾರಿಮಾಡಿದ್ದೇವೆ. ಸಾಮಾಜಿಕ ನ್ಯಾಯ, ಸಹಬಾಳ್ವೆ, ಸಮಸ್ತ ಕರ್ನಾಟಕದ ಅಭಿವೃದ್ಧಿಯ ಮುನ್ನೋಟದೊಂದಿಗೆ ಆರಂಭಿಸಿದ ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣಕ್ಕಿಂದು ಎರಡು ವರ್ಷಗಳ ಸಂಭ್ರಮ. ಸದೃಢ, ಸಶಕ್ತ, ಸ್ವಾವಲಂಬಿ, ಸೌಹಾರ್ದ ಕರ್ನಾಟಕದ ಮರುನಿರ್ಮಾಣ ಕಾರ್ಯದಲ್ಲಿ ನಮ್ಮ ಜೊತೆಯಾಗಿರುವ ನಾಡಿನ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲವೇ ನಮ್ಮ ಬಲ. ಮುಂದೆಯೂ ನಿಮ್ಮ ಸಹಕಾರ ಹೀಗೆಯೇ ಇರಲೆಂದು ಆಶಿಸುತ್ತೇನೆ. #ಪ್ರಗತಿಯತ್ತ_ಕರ್ನಾಟಕ #2yearsOfGuaranteeSarkara


ಬಿರ್ಸಾ ಮುಂಡಾ ಅವರು ಬ್ರಿಟಿಷರ ಸರ್ವಾಧಿಕಾರಿ, ವಸಾಹತುಶಾಹಿ ಆಡಳಿತದ ವಿರುದ್ಧ ಬುಡಕಟ್ಟು ಸಮುದಾಯಗಳ ಪ್ರತಿರೋಧದ ದನಿಯಾಗಿ ಹೊರಹೊಮ್ಮಿದವರು. ಸಾಮಾಜಿಕ ಹಾಗೂ ಆರ್ಥಿಕ ಅನ್ಯಾಯಗಳ ವಿರುದ್ಧದ ಹೋರಾಟವನ್ನು ಶಾಂತಿ, ಸತ್ಯ ಮತ್ತು ನ್ಯಾಯದ ಹಾದಿಯಲ್ಲಿ ಮುನ್ನಡೆಸಿದ ಅವರ ಜೀವನ ಸಾಧನೆ ಎಂದೆಂದಿಗೂ ಮಾದರಿ. ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ ಬದುಕು ಸವೆಸಿದ ಮಹಾ ಚೇತನಕ್ಕೆ ಪುಣ್ಯಸ್ಮರಣೆಯ ನಮನಗಳು. - ಮುಖ್ಯಮಂತ್ರಿ ಸಿದ್ದರಾಮಯ್ಯ


ಸಾಮಾಜಿಕ, ಆರ್ಥಿಕ ಮತ್ತು ಪ್ರಾದೇಶಿಕ ನ್ಯಾಯದ ಅನುಷ್ಠಾನದ ಪ್ರಕ್ರಿಯೆಗೆ ಚಾಲನೆ ನೀಡಿ, ಸ್ವತಂತ್ರ ಭಾರತದಲ್ಲಿ ಸ್ವಾಭಿಮಾನಿ, ಸ್ವಾವಲಂಬಿ ಮತ್ತು ಸದೃಡ ಕರ್ನಾಟಕ ನಿರ್ಮಾಣಕ್ಕೆ ಭದ್ರಬುನಾದಿ ಹಾಕಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ನವ ಕರ್ನಾಟಕದ ಶಿಲ್ಪಿಯಾಗಿದ್ದಾರೆ. ಇಂದು ಎಲ್ಲ ಆಡಳಿತಾರೂಢರ ಗಮನಸೆಳೆಯುತ್ತಿರುವ ಮತ್ತು ಅನುಕರಣಿಯವಾಗಿರುವ ನಮ್ಮ 'ಕರ್ನಾಟಕ ಅಭಿವೃದ್ದಿ ಮಾದರಿ'ಗೆ ಅರಸು ಅವರ ಚಿಂತನೆ ಮತ್ತು ಸಾಧನೆ ಪ್ರೇರಕ ಶಕ್ತಿಯಾಗಿದೆ. ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯ ದಿನವಾದ ಇಂದು ಆ ಮಹಾಚೇತನವನ್ನು ಗೌರವ ಮತ್ತು ಅಭಿಮಾನದಿಂದ ನೆನೆಯುತ್ತೇನೆ.


ದೇಶದ ಸ್ವಾತಂತ್ರ್ಯ ಹೋರಾಟದಿಂದ ಮೊದಲುಗೊಂಡು ಭಾರತವನ್ನು ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ ರಾಷ್ಡ್ರವಾಗಿ ರೂಪಿಸುವಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಕೊಡುಗೆ ಅನನ್ಯ. ಆಗಷ್ಟೇ ಸ್ವಾತಂತ್ರ್ಯ ಪಡೆದು ಅನಕ್ಷರತೆ, ಧಾರ್ಮಿಕ ವೈಷಮ್ಯ, ಸಾಮಾಜಿಕ ಅಸಮಾನತೆ, ಬಡತನಗಳಿಂದ ನರಳುತ್ತಿದ್ದ ಭಾರತವನ್ನು ಪ್ರಗತಿಯ ಹಾದಿಯಲ್ಲಿ ಅವರು ಮುನ್ನಡೆಸಿದ ಪರಿ ಪ್ರತಿಯೊಬ್ಬ ಭಾರತೀಯನಿಗೂ ಸ್ಪೂರ್ತಿ. ನೆಹರೂರವರ ಪುಣ್ಯಸ್ಮರಣೆಯ ಈ ದಿನ ಅವರ ಜೀವನಾದರ್ಶಗಳನ್ನು ಗೌರವದಿಂದ ಸ್ಮರಿಸಿ, ನಮಿಸೋಣ. #JawaharlalNehru


ನಾಡಿನ ಸಮಸ್ತ ಮುಸ್ಲಿಂ ಬಂಧುಗಳಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ತ್ಯಾಗ - ಬಲಿದಾನದ ಸಂಕೇತವಾದ ಬಕ್ರೀದ್ ಸಮಾಜದಲ್ಲಿ ಶಾಂತಿ - ಸೌಹಾರ್ದತೆ ಬೆಳೆಯಲು ಪ್ರೇರಕ ಶಕ್ತಿಯಾಗಲಿ ಎಂದು ಹಾರೈಸುತ್ತೇನೆ.


ಬ್ರಿಟೀಷರ ವಸಾಹತುಶಾಹಿ, ಸರ್ವಾಧಿಕಾರಿ ಆಡಳಿತಕ್ಕೆ ಪ್ರತಿರೋಧ ಒಡ್ಡಿ, ದೇಶವಾಸಿಗಳಲ್ಲಿ ಸ್ವತಂತ್ರ ಭಾರತದ ಕನಸು ಬಿತ್ತಿದ ವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಶೌರ್ಯ, ಸಾಹಸ, ಬಲಿದಾನ ಚಿರಸ್ಮರಣೀಯವಾದುದ್ದು. ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಅರ್ಪಿಸುತ್ತೇನೆ.


ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು. ಆರ್‌ಸಿಬಿ ತಂಡದ ಸೋಲು - ಗೆಲುವು, ಏಳು - ಬೀಳುಗಳಲ್ಲಿ ಸದಾ ಜೊತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ - ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎನ್ನುವುದು ನನ್ನ ಅಂತರಾಳದ ಬಯಕೆ. "ತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆ", ಆ ಸಿಹಿ ಇಂದು ಕನ್ನಡಿಗರ ಮತ್ತು ಜಗತ್ತಿನಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳ ಪಾಲಿಗಿರಲಿ ಎಂದು ಹಾರೈಸುತ್ತೇನೆ.


ಅಸ್ಪೃಶ್ಯತೆ, ಅಂಧಶ್ರದ್ಧೆ, ಸ್ತ್ರೀ ಶೋಷಣೆ, ಅಸಮಾನತೆಗಳಿಂದ ದೇಶದ ಬಹುಸಂಖ್ಯಾತ ಜನರು ನಲುಗಿ ಹೋಗಿದ್ದ ಕಾಲದಲ್ಲಿ ಬ್ರಹ್ಮಸಮಾಜದ ಮೂಲಕ ನೊಂದವರ ಬದುಕಿಗೆ ಭರವಸೆಯ ಬೆಳಕಾಗಿ ಕಂಡವರು ರಾಜಾರಾಂ ಮೋಹನ್ ರಾಯ್ ಅವರು. ಶಿಕ್ಷಣ, ಪತ್ರಿಕೋದ್ಯಮ, ಚಳವಳಿ ಹೀಗೆ ಎಲ್ಲಾ ರಂಗಗಳಲ್ಲಿಯೂ ತೊಡಗಿಸಿಕೊಂಡು ಜನಜಾಗೃತಿ ಮೂಡಿಸಿದ ಅವರ ಬದುಕು ಆದರಣೀಯವಾದುದ್ದು. ಸಮಾಜ ಪರಿವರ್ತನೆಗಾಗಿ ನಿಸ್ವಾರ್ಥ ದುಡಿದ ಮಹಾನ್ ಚೇತನಕ್ಕೆ ಜನ್ಮದಿನದ ನಮನಗಳು.
