
Badukalu Kaliyiri
2.4K subscribers
About Badukalu Kaliyiri
ಸಮುದ್ರದ ಅಲೆ ನನಗೆ ಆದರ್ಶ. ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ. ಬಿದ್ದರೂ ಏಳುತ್ತಿರುವುದಕ್ಕೆ. ಬೀಳುವುದನ್ನು ಕಂಡ ನೀವು ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ, ಚೆನ್ನಾಗಿರುತ್ತದೆ💥💪💥 ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು...💪 ನಿಮ್ಮ ಮನದನಿಯ ಸಾರಥಿ!🤗 t.me/lovingchallenges
Similar Channels
Swipe to see more
Posts

*Affirmations* 😊 I can do this I believe in myself I get better every single day All my problems have solutions Challenges help me grow I am an amazing person I can learn anything I stay focused on my exams I always do my best I am capable I am confident in my abilities I am doing my best I am strong and determined I can meet my goals I enjoy preparing for exams I succeed even in stressful situations Today will be great I always get good grades I am always relaxed during exams I am an excellent student I am kind and honest I am learning to enjoy studying I am proud of myself I am smart and capable.


*ಸದ್ಗುಣಗಳಿಂದ ಶೋಭಿಸುವ ವ್ಯಕ್ತಿಗಳು, ಮಳೆ ಬಿಸಿಲುಗಳಿಗಾಗಲಿ, ಕಷ್ಟ ನಷ್ಟಗಳಿಗಾಗಲಿ ಸ್ಪಂದಿಸುವುದಿಲ್ಲ. ಏಕೆಂದರೆ, ಅವರು ಎಲ್ಲ ಸಮಯದಲ್ಲೂ ಹಿತವಾಗಿಯೂ, ಪ್ರಶಾಂತತೆಯಿಂದಲೂ ಕೂಡಿರುತ್ತಾರೆ.*

ಸಮಸ್ಯೆಗಳಿಗೆ ಕುಂಟು ನೆಪ ಹೇಳುವುದು ಇಂದಿಗೆ ಸುಲಭವಾಗಬಹುದು. ಆದರೆ ಅದೇ ನಾಳೆಗೆ ಸವಾಲಾಗಿ ಪರಿಣಮಿಸುತ್ತದೆ. *ಶಿಸ್ತನ್ನು ಪಾಲಿಸುವುದು ಇಂದಿಗೆ ಕಷ್ಟ ಎಂದು ಅನಿಸಬಹುದು. ಆದರೆ ಅದೇ ನಾಳೆಗೆ ಸುಲಭವಾಗಿ ಪರಿಣಮಿಸುತ್ತದೆ.*

ದಿನದ ಮಟ್ಟಿಗೆ ಮಗುವಾಗಿ! ಈ ದಿನ ಬೆಳಗ್ಗೆ ಹೇಳುತ್ತಲೇ ಹೀಗೊಂದು ನಿರ್ಧಾರಕ್ಕೆ ಬಂದುಬಿಡಿ. ಇವತ್ತೊಂದು ದಿನ ನಾನು ಮಗು ಯಾವುದೇ ಕಾರಣಕ್ಕೂ ಆ ಪರಿಧಿಯಿಂದ ಹೊರ ಬರುವುದಿಲ್ಲ ಎಂದು ಸಂಕಲ್ಪಿಸಿಕೊಳ್ಳಿ. ಅಲ್ಲಿ ಕಲ್ಮಶವಿಲ್ಲ, ಕಪಟವಿಲ್ಲ, ಸಿಟ್ಟು, ನಗು -ಅಳು ಹೀಗೆ ಭಾವನೆಗಳಿಗೆ ಚೌಕಸಿ ಇಲ್ಲ, ಆಟ ಮನರಂಜನೆಗಳಿಗೆ ಮಿತಿ ಇಲ್ಲ, ಕುತೂಹಲಕ್ಕೆ ಕೊನೆಯಿಲ್ಲ. ಒಟ್ಟಾರೆ ಮನಸ್ಸು ಪಕ್ಕಾ ಮೊದಲಿನ ಹಸಿತನಕ್ಕೆ ಮರಳಿ ಬಿಡಬೇಕು. *ಏಕೆಂದರೆ ಹುಟ್ಟುತ್ತಲೇ ಮಗು ವಿಶ್ವಮಾನವ!* *Happy* Morning😊 *Happy* Monday💐

ಇನ್ನೂ ಮಲಗಿಯೇ ಇದ್ದರೆ ಉಪಯೋಗವಿಲ್ಲ; ಏಳಿ, ಏದ್ದೆಳಿ, ಗುರಿಯೆಂಬ ಗೆರೆಯನ್ನು ತಲುಪಲು ಕೆಲಸವನ್ನು ಪ್ರಾರಂಭಿಸಿ... *ಮುಂದೆ ಮಲಗಿದರಾಯಿತು!*

"ಅಂದವರು ನಗುತಿಹರು, ನೀನೇಕೆ ಅಳುತಿರುವೆ? ನೀನು ಅಳಲೆಂದೇ ಅಂದಿರುವ ಅವರ ಆಸೆಯನು ನೀನೇಕೆ ಈಡೇರಿಸುವೆ? ಅಂದವರ ಮಾತು ಹೋಗಲಿ ಗಾಳಿಯಲಿ... *ನಗುತಿರಲಿ ನಿನ್ನ ಮೊಗ ಹರುಷದಲಿ!”.* *Happy* Morning😊 *Happy* Tuesday💐


ನಾನು ಏನೂ ಅಲ್ಲ ಅಂತ ಭಾವಿಸಬೇಡಿ. ಹಾಗೆಯೇ ನಾನೇ ಸರ್ವಸ್ವ ಅಂತಾನೂ ತಿಳಿಯಬೇಡಿ. *ನಾನು ಏನು ಬೇಕಾದರೂ ಸಾಧಿಸುವ ಸಾಮರ್ಥ್ಯವಿರುವ ಒಬ್ಬ ಸಾಮಾನ್ಯ ಎಂದು ಭಾವಿಸಿ. ಆಗ ನಿಮ್ಮ ನಡೆ-ನುಡಿ ಎಲ್ಲವೂ ಹೆಚ್ಚು ಅರ್ಥಪೂರ್ಣವಾಗಿರುತ್ತವೆ.*


ನಿಮ್ಮ ಜೀವನದ ಲೇಖಕರು ನೀವೇ. ನೀವು ಏನನ್ನು ಬೇಕಾದರೂ ಬರೆಯಲು ಸ್ವತಂತ್ರರು. ನಿಮ್ಮ ಬಗ್ಗೆ ಏನೇ ಬರೆದರೂ ಅದನ್ನು ಬೇರೆಯವರು ಓದುತ್ತಾರೆ. ಹೀಗಾಗಿ ಏನು ಬರೆಯಬೇಕು ಎಂಬುದು ನಿಮಗೆ ಬಿಟ್ಟಿದ್ದು. ಎಡಿಟ್ ಮಾಡಲು, ಬರೆದಿದ್ದನ್ನು ಹರಿದು ಪುನಃ ಬರೆಯಲು ಹಿಂದೇಟು ಹಾಕಬಾರದು. *ಅಂತಿಮ ಕಾಪಿ ಚೆನ್ನಾಗಿರಬೇಕಷ್ಟೆ.* *Happy* Morning😊 *Happy* Wednesday💐


ನೀವು ಏನು ಅಂತ... ನಿಮ್ಮ ಸುತ್ತ ಮುತ್ತ ಇರುವ ವ್ಯಕ್ತಿಗಳಿಂದ ತಿಳಿಯುತ್ತೆ. ಸತ್ಪುರುಷರ ಸಹವಾಸವು ಬುದ್ಧಿಯ ಜಡತ್ವವನ್ನು ಹೋಗಲಾಡಿಸುತ್ತದೆ; ಮಾತಿನಲ್ಲಿ ಸತ್ಯವನ್ನು ಚಿಮುಕಿಸುತ್ತದೆ; ಗೌರವವನ್ನು ಹೆಚ್ಚಿಸುತ್ತದೆ; ಪಾಪವನ್ನು ದೂರಮಾಡುತ್ತದೆ; ಮನಸ್ಸನ್ನು ಪ್ರಸನ್ನಗೊಳಿಸುತ್ತದೆ; ಎಲ್ಲ ದಿಕ್ಕುಗಳಲ್ಲಿಯೂ ಕೀರ್ತಿಯನ್ನು ಹರಡುತ್ತದೆ. ಆದ್ದರಿಂದ ಯಾವಾಗಲೂ ಒಳ್ಳೆಯವರ ಸಹವಾಸ ಮಾಡಬೇಕು.